ಜವಾಹರ್‌ಲಾಲ್ ವೈದ್ಯಕೀಯ ಪದವಿ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಿಂದ ನಡೆದ ಸಂಶೋಧನಾ ವಿಷಯ ಮಂಡನೆ ಕಾರ್ಯಕ್ರಮದಲ್ಲಿ 3ನೇ ಸ್ಥಾನ ಪಡೆದ ನಗರದ ವಿದ್ಯಾರ್ಥಿಗಳು
ದಾವಣಗೆರೆ, ಜು. 8- ನಗರದ ಶಾಮನೂರು ಶಿವಶಂಕರಪ್ಪ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಈಚೆಗೆ ಜವಾಹರ್ ಲಾಲ್ ವೈದ್ಯಕೀಯ ಪದವಿ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಿಂದ ಏರ್ಪಡಿಸಿದ್ದ ಸಂಶೋಧನಾ ವಿಷಯ ಮಂಡನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಲೇಜಿನ ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕ ಡಾ. ವಿನಯ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ವಿಷಯ ಮಂಡಿಸಿ 3ನೇ ಸ್ಥಾನ ಪಡೆದಿರುತ್ತಾರೆ.
ಸಾಂಕ್ರಾಮಿಕ ರೋಗಗಳು/ಸಾಂಕ್ರಾಮಿಕವಲ್ಲದ ರೋಗಗಳು/ಮಹಿಳೆಯರ ಮತ್ತು ಮಕ್ಕಳ ಆರೋಗ್ಯ/ಅನುವಂಶಿಕ ಅಸ್ವಸ್ಥತೆ ಕುರಿತಾಗಿ ಸಾರ್ವಜನಿಕ ಆರೋಗ್ಯಕ್ಕೆ ಒದಗಿಸಬೇಕಾದ ಪ್ರಾಮುಖ್ಯತೆ ವಿಷಯದ ಪರಿಕಲ್ಪನೆಗಳು/ತಂತ್ರಜ್ಞಾನಗಳ ಮೂಲ ಸಂಶೋಧನಾ ವಿಷಯದ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ ಇನ್ ವೆನ್ಷನ್ ಅಂಡ್ ವ್ಯಾಲಿಡೇಷನ್ ಆಫ್ ಎ ನ್ಯೂ ಡಿವೈಸ್ ಫಾರ್ ಇಂಡಿಯನ್ ಪಿಡಿಯಾಟ್ರಿಕ್ ಪಾಪ್ಯುಲೇಷನ್ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳಾದ ವೈ.ಪಿ. ಶ್ರೇಯಾದಿತ, ಕೆ.ಎಸ್. ವಿಶ್ವಾಸ್ ಹಾಗೂ ವಿಜಯಕುಮಾರ್ ಬಸರಗಿ ತಂಡವು ಇಂಡಿಯನ್ ಲೆನ್ತ್ ಬೇಸ್ಡ್ ವೇಯ್ಟ್ ಪ್ರಿಡಿಕ್ಟರ್ ಟೇಪ್ (ಐಎಲ್ ಡಬ್ಲ್ಯುಪಿಟಿ) ಎಲಿವೇಟ್-12 ಸಂಶೋಧನೆ ಮಾಡಿ ವಿಷಯ ಮಂಡಿಸಿದೆ.
ಎಲಿವೇಟ್ -12, ಮಕ್ಕಳ ಬೆಳವಣಿಗೆಯ ಹೊಸ ಆವಿಷ್ಕಾರ ಸಾಧನವಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಂಡಿಸಿದ ಪ್ರತಿಷ್ಠಿತ ಅಂಶಗಳನ್ನೊಳಗೊಂಡ 10 ವಿಷಯಗಳಲ್ಲಿ ದಾವಣಗೆರೆ ಎಸ್.ಎಸ್.ಐ.ಎಂ.ಎಸ್ ಮತ್ತು ಸಂಶೋಧನಾ ಕೇಂದ್ರದ ಮೂವರು ವಿದ್ಯಾರ್ಥಿಗಳಿಂದ ಮಂಡನೆಯಾದ ಎಲಿವೇಟ್ -12 ವಿಷಯವು ಜವಾಹರ ಲಾಲ್ ವೈದ್ಯಕೀಯ ಪದವಿ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ 7 ಜನ ನಿರ್ಣಾಯಕರ ನಿರ್ಣಯದಂತೆ 3ನೇ ಸ್ಥಾನ ಪಡೆದಿರುವ ವಿದ್ಯಾರ್ಥಿಗಳಿಗೆ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ, ಬಾಪೂಜಿ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಎಸ್.ಎಸ್. ಕೇರ್ ಟ್ರಸ್ಟ್‌ನ ಖಾಯಂ ಸದಸ್ಯರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್, ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಸ್. ಪ್ರಸಾದ್, ವೈದ್ಯಕೀಯ ನಿರ್ದೇಶಕ ಡಾ. ಅರುಣ್‌ಕುಮಾರ್ ಅಜ್ಜಪ್ಪ, ಉಪ ಪ್ರಾಂಶುಪಾಲರಾದ ಡಾ. ಶಶಿಕಲಾ ಪಿ. ಕೃಷ್ಣಮೂರ್ತಿ ಶುಭ ಹಾರೈಸಿದ್ದಾರೆ.