ನಾಳೆ `ಲೋಡಿಂಗ್ ಕಾರ್ಮಿಕರ ದಶಮಾನೋತ್ಸವ’

ದಾವಣಗೆರೆ, ಜು. 8- ಕರ್ನಾಟಕ ಶ್ರಮಿಕ ಶಕ್ತಿ, ಗುತ್ತಿಗೆ, ಅಸಂಘಟಿತ ಮತ್ತು ಅಭದ್ರ ಕಾರ್ಮಿಕರ ಫೆಡರೇಷನ್ ಆಫ್ ಟ್ರೇಡ್ ಯೂನಿಯನ್ಸ್ ವತಿಯಿಂದ  ನಾಡಿದ್ದು ದಿನಾಂಕ 10 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನ್ನಭಾಗ್ಯಕ್ಕೆ 10 ವರ್ಷಗಳ ಹಿನ್ನೆಲೆಯಲ್ಲಿ `ಲೋಡಿಂಗ್ ಕಾರ್ಮಿಕರ ದಶಮಾನೋತ್ಸವ ಹಾಗೂ ಶ್ರಮಿಕರ ಹಕ್ಕೊತ್ತಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರಾದ ಸತೀಶ್ ಅರವಿಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅನ್ನಭಾಗ್ಯ ಯೋಜನೆ ಹಮಾಲಿ ಕಾರ್ಮಿಕರಿಗೆ ಕೆಲಸದ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, 12 ಗಂಟೆಗೆ ಹೆಚ್ಚಿಸಿರುವ ಕೆಲಸದ ಅವಧಿಯನ್ನು ಮೊದಲಿನಂತೆ 8 ಗಂಟೆಗೆ ಇಳಿಸುವುದು, ಮಹಾರಾಷ್ಟ್ರ ಮಾದರಿಯಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ, ವಾರದ ರಜೆ, ಮಹಿಳಾ ಕಾರ್ಮಿಕರಿಗೆ ತಿಂಗಳ ರಜೆ, ಹೆರಿಗೆ ಭತ್ಯೆ ನೀಡುವುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಸಮಾವೇಶದಲ್ಲಿ ಮಂಡಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆದಿಲ್ ಖಾನ್, ಅಷ್ಫಾಕ್, ಅಕ್ಬರ್ ಅಲಿ, ವೆಂಕಟೇಶ್, ಷರೀಫ್ ಉಪಸ್ಥಿತರಿದ್ದರು.

error: Content is protected !!