ಚುರುಕಾದ ಮುಂಗಾರು; ರೈತರಿಗೆ ಕೃಷಿ ಇಲಾಖೆ ಸಲಹೆಗಳು

`ಅಧಿಕ ಇಳುವರಿಗೆ ರೈತರು ಉತ್ತಮ ಬೀಜ ಮತ್ತು ಆರೋಗ್ಯವಂತ ಸಸಿಗಳನ್ನು ಉಪಯೋಗಿಸಬೇಕು’

`ಬಿತ್ತನೆ ತಡವಾಗಿರುವುದರಿಂದ ಕಾಂಡಕೊರಕ ಬಾಧೆ ತಡೆಗೆ ಮುನ್ನೆಚ್ಚರಿಕೆ ಅಗತ್ಯ’

ದಾವಣಗೆರೆ, ಜು.7-   ಮುಂಗಾರು ಹಂಗಾ ಮು ಜುಲೈ ಮಾಹೆಯಲ್ಲಿ ಚುರುಕಾಗಿದ್ದು, ರೈತರು ಮುಂಗಾರು ಬೆಳೆ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳು ತ್ತಿದ್ದಾರೆ. ಅಧಿಕ ಇಳುವರಿ ಪಡೆಯಲು ಉತ್ತಮ ಬೀಜದ ಕೊಡುಗೆ ಅಪಾರವಾಗಿದೆ. `ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ನಾಣ್ನುಡಿಯಂತೆ ಉತ್ತಮ ಇಳುವರಿ ಪಡೆಯುವಲ್ಲಿ ಆರೋಗ್ಯವಂತ ಸಸಿಗಳ ಪಾತ್ರ ಪ್ರಮುಖವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸಲಹೆ ನೀಡಿದ್ದಾರೆ.    

ಮಣ್ಣಿನಿಂದ ಹಾಗೂ ಬೀಜದಿಂದ ಹರಡುವ ರೋಗಗಳನ್ನು ತಡೆಗಟ್ಟಲು, ಸಾರಜನಕ ಮತ್ತು ರಂಜಕ, ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿ ಸಲು ಬೀಜೋಪಚಾರ ಅವಶ್ಯಕ. ಮುಸುಕಿನ ಜೋಳ, ಶೇಂಗಾ, ತೊಗರಿ ಜಿಲ್ಲೆಯ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾಗಿದ್ದು, ಬಿತ್ತನೆ ಕೈಗೊಳ್ಳುವ ಮುನ್ನ ರೈತ ಬಾಂಧವರು ಈ ಕೆಳಕಂಡ ತಾಂತ್ರಿಕತೆಗಳನ್ನು ಅನುಸರಿಸಲು ಕೋರಿದೆ.

ಮುಸುಕಿನ ಜೋಳದ ಬೆಳೆಯಲ್ಲಿ ಎಕರೆಗೆ ಬೇಕಾಗುವ ಬಿತ್ತನೆ ಬೀಜಕ್ಕೆ 200 ಗ್ರಾಂ ಅಝೋಸ್ಪೈರಿ ಲಂ ಮತ್ತು 200 ಗ್ರಾಂ ರಂಜಕ ಕರಗಿ ಸುವ ಜೀ ವಾಣು ಗೊಬ್ಬರದೊಂದಿಗೆ ಬೀಜಪೋಚಾರ ಮಾಡು ವುದು. ಬೂಜು ರೋಗ ಅಥವಾ ಕೇದಿಗೆ ರೋಗ ಕಂಡುಬರುವ ಪ್ರದೇಶದಲ್ಲಿ ಮೆಟಲಾಕ್ಸಿಲ್+ಮ್ಯಾಂ ಕೋಜೆಬ್ ಮಿಶ್ರಣವನ್ನು 3 ಗ್ರಾಂನಂತೆ ಪ್ರತಿ ಕಿ.ಗ್ರಾಂ ಬೀಜಕ್ಕೆ ಬೆರೆಸಿ ಬೀಜೋಪಚಾರ ಮಾಡುವುದು.

ಬಿತ್ತನೆ ತಡವಾಗಿರುವುದರಿಂದ ಕಾಂಡಕೊರಕ ಅಥವಾ ಫಾಲ್ ಆರ್ಮಿ ವರ್ಮ್  ಬಾಧೆ ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ಕಿ.ಗ್ರಾಂ ಬಿತ್ತನೆ ಬೀಜಕ್ಕೆ 10 ಮಿ.ಲೀ ಕ್ಲೊರೋಫೈರಿಫಾಸ್ 20 ಇ.ಸಿ ಅಥವಾ ಥಯೋಮಿತಾಕ್ಸೋಮ್ 25%, 4 ಗ್ರಾಂ ಪ್ರತಿ ಕಿ.ಗ್ರಾಂ ಬಿತ್ತನೆ ಬೀಜಕ್ಕೆ ಹಾನಿಯಾಗದಂತೆ ಲೇಪಿಸಿ ಬಿತ್ತನೆ ಮಾಡುವುದು.

ನೆಲಗಡಲೆ   ಬಿತ್ತನೆ ಮಾಡುವ ಮೊದಲು ಪ್ರತಿ ಕಿ.ಗ್ರಾಂ ನೆಲಗಡಲೆ ಬೀಜಕ್ಕೆ 5 ಗ್ರಾಂ ಟ್ರೈಕೋಡರ್ಮ ಅಥವಾ 2.5 ಗ್ರಾಂ ಥೈರಾಮ್‌ ಅನ್ನು ಬೆರೆಸಿ, ನೆರಳಿನಲ್ಲಿ ಒಣಗಿಸಬೇಕು, ನಂತರ ಒಂದು ಎಕರೆ ಬಿತ್ತನೆ ಬೀಜಕ್ಕೆ 150 ಗ್ರಾಂ ರೈಜೋಬಿಯಂ ಮತ್ತು 400 ಗ್ರಾಂ ಪಿ.ಎಸ್.ಬಿ ಜೈವಿಕ ಗೊಬ್ಬರಗಳನ್ನು ಅಂಟು ದ್ರಾವಣ ಬಳಸಿ ಉಪಚರಿಸಿ ಬಿತ್ತನೆಗೆ ಬಳಸಬೇಕು.

ಗೊಣ್ಣೆ ಹುಳುವಿನ ಬಾಧೆ ಇದ್ದಲ್ಲಿ ಪ್ರತಿ ಕಿ.ಗ್ರಾಂ ಬಿತ್ತನೆ ಬೀಜಕ್ಕೆ 10 ಮಿ.ಲೀ ಕ್ಲೋರೋಫೈರಿಫಾಸ್ 20 ಇ.ಸಿ ಯನ್ನು  ಬೀಜಕ್ಕೆ ಹಾನಿಯಾಗದಂತೆ ಲೇಪಿಸಿ ಬಿತ್ತನೆ ಮಾಡುವುದು. ಕತ್ತು ಕೊಳೆ ರೋಗದ ನಿರ್ವಹಣೆಗೆ ಪ್ರತಿ ಕಿ. ಗ್ರಾಂ ಬಿತ್ತನೆ ಬೀಜಕ್ಕೆ 2 ಗ್ರಾಂ ಕಾರ್ಬೆಂಡೈಜಿಂ ಅಥವಾ ಕ್ಯಾಪ್ಟನ್ ನ್ನು ಬೀಜೋಪಚಾರ ಮಾಡಿ ಬಿತ್ತುವುದು. 

ರಾಗಿ:  ಬೆಂಕಿ ರೋಗ/ ಇಳುಕು ರೋಗ ಮತ್ತು ಕಂದು ಚುಕ್ಕೆ ರೋಗದ ಹತೋಟಿಗೆ ಪ್ರತಿ ಕಿ.ಗ್ರಾಂ ಬಿತ್ತನೆ ಬೀಜಕ್ಕೆ 2 ಗ್ರಾಂ. ಕಾರ್ಬೆಂಡೈಜಿಂನಿಂದ ಉಪಚಾರ ಮಾಡಿ ಬಿತ್ತನೆ ಮಾಡುವುದು.

ದ್ವಿದಳ ಬೆಳೆಗಳು: ತೊಗರಿ, ಹೆಸರು, ಉದ್ದು, ಅವರೆ ಇತರೆ ದ್ವಿದಳ ಧಾನ್ಯಗಳನ್ನು ಬಿತ್ತುವ ಮೊದಲು 200 ಗ್ರಾಂ ರೈಜೋಬಿಯಂ ಮತ್ತು 200 ಗ್ರಾಂ ರಂಜಕ ಕರಗಿಸುವ ಜೀವಾಣು ಗೊಬ್ಬ ರದೊಂದಿಗೆ ಬೀಜಪೋಚಾರ ಮಾಡುವುದು.  ತೊಗರಿ ಬೆಳೆಯಲ್ಲಿ ಸೊರಗು ರೋಗದ ಹತೋಟಿಗೆ ಪ್ರತಿ ಕಿ. ಗ್ರಾಂ ಬಿತ್ತನೆ ಬೀಜಕ್ಕೆ 5 ಗ್ರಾಂ ಟ್ರೈಕೋಡರ್ಮ ವಿರಿಡೆ ಅಥವಾ 2 ಗ್ರಾಂ ಕಾರ್ಬೆಂಡೈಜಿಂ ಅನ್ನು ಬೀಜೋಪಚಾರ ಮಾಡಿ ಬಿತ್ತುವುದು.  ಸಾವಯವ/ನೈಸರ್ಗಿಕ ಕೃಷಿ ಅನುಸ ರಿಸುತ್ತಿರುವ ಕೃಷಿಕರು ಬೀಜಾಮೃತ ತಯಾರಿಸಿ ಕೊಂಡು ಬೀಜೋಪಚಾರ ಮಾಡಬಹುದು

ಬೀಜಾಮೃತ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು:  20 ಲೀ. ನೀರು,  5 ಕೆ.ಜಿ. ದೇಸಿ ಹಸುವಿನ ಸಗಣಿ, 5 ಲೀಟರ್ ದೇಸಿ ಹಸುವಿನ ಗಂಜಲ, 50 ಗ್ರಾಂ ಸುಣ್ಣ, ಒಂದು ಬೊಗಸೆ ಜಮೀನಿನ ಫಲವತ್ತಾದ ಮಣ್ಣು.

ಬೀಜಾಮೃತ ತಯಾರಿಸುವ ವಿಧಾನ:   ಬಿತ್ತನೆ ಹಿಂದಿನ ದಿನ ತೆಳುವಾದ ಹತ್ತಿ ಬಟ್ಟೆಯಲ್ಲಿ 5 ಕೆ. ಜಿ. ಸಗಣಿಯನ್ನು ಕಟ್ಟಿ, 20 ಲೀ. ನೀರಿರುವ ಪ್ಲಾಸ್ಟಿಕ್ ಬಕೆಟ್ / ಡ್ರಮ್‍ನಲ್ಲಿ ತೂಗುಬಿಡಿ. 

 ಒಂದು ಲೀ. ನೀರಿನಲ್ಲಿ 50 ಗ್ರಾಂ ಸುಣ್ಣವನ್ನು ಪ್ರತ್ಯೇಕವಾಗಿ ಬೆರೆಸಿ ತಿಳಿಯಾಗಲು ಬಿಡಿ.

 ಬಿತ್ತನೆ ಮಾಡುವ ದಿನ ಇಳಿಬಿಟ್ಟಿರುವ  ಸಗಣಿ ಗಂಟನ್ನು ಚೆನ್ನಾಗಿ ಕಲಕಿಸಿ, ಐದಾರು ಬಾರಿ ಹಿಂಡಿ ತೆಗೆಯಿರಿ. ಸುಣ್ಣದ ತಿಳಿ, ಗಂಜಲ ಹಾಗೂ ಮಣ್ಣನ್ನು ಸೆಗಣಿ ತಿಳಿಗೆ ಹಾಕಿ ಚೆನ್ನಾಗಿ ಕಲೆಸಿ.

ನಂತರ ಬೀಜಗಳನ್ನು ಒಂದು ನಿಮಿಷ ಮಾತ್ರ ಬೀಜಾಮೃತದಲ್ಲಿ ಮುಳುಗಿಸಿ ತೆಗೆಯಿರಿ, ನೆರಳಿನಲ್ಲಿ ಒಣಗಿಸಿ ತೇವ ಆರಿದ ನಂತರ ಬಿತ್ತನೆ ಮಾಡಿ. 

ವಿಶೇಷ ಸೂಚನೆ: ಬೀಜೋಪಚಾರ ಮಾಡು ವಾಗ ಮೊದಲು ಶೀಲಿಂಧ್ರನಾಶಕ ನಂತರ ಕೀಟ ನಾಶಕ ಕೊನೆಯಲ್ಲಿ ಜೈವಿಕಗೊಬ್ಬರಗಳಿಂದ ಬೀಜೋಪಚಾರ ಮಾಡುವುದು ಸೂಕ್ತ ಎಂದು ಜಂಟಿ ಕೃಷಿ ನಿರ್ದೇಶಕರು   ತಿಳಿಸಿರುತ್ತಾರೆ.

error: Content is protected !!