ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವು

ದಾವಣಗೆರೆ, ಜು. 9- ಧಾರವಾಡದ ವಿದ್ಯಾಪೋಷಕ ಸಂಸ್ಥೆಯ ನರ್ಚರ್ ಮೆರಿಟ್ ಯೋಜನೆಯಡಿಯಲ್ಲಿ 2023-24 ನೇ ಶೈಕ್ಷಣಿಕ ಸಾಲಿಗಾಗಿ ವೃತ್ತಿಪರ (ಇಂಜಿನಿಯರಿಂಗ್, ಮೆಡಿಕಲ್) ಪದವಿ ಸೇರಬಯಸುವ, ಆರ್ಥಿಕ ಸಂಕಷ್ಟದಲ್ಲಿರುವ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಲಾಗುವುದು.

ವಿದ್ಯಾರ್ಥಿನಿಯರು ಮೊದಲನೇ ಸಲ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯನ್ನು 2023 ರಲ್ಲಿ ಬರೆದಿರಬೇಕು. ಶೇ. 80 ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ದ್ವಿತೀಯ ಪಿಯುಸಿ ನಂತರ ಇಂಜಿನಿಯರಿಂಗ್, ಮೆಡಿಕಲ್ ವಿಭಾಗಗಳಿಗೆ ಪ್ರವೇಶ ಬಯಸುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇಂಜಿನಿಯರಿಂಗ್ ಸೇರಬಯಸುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಿಇಟಿ ಪರೀಕ್ಷೆಯಲ್ಲಿ 25000 ಕ್ಕಿಂತ ಕಡಿಮೆ ರಾಂಕ್‌ನೊಂದಿಗೆ ಉತ್ತೀರ್ಣರಾಗಿರಬೇಕು. ಮೆಡಿಕಲ್ ಸೇರಬಯಸುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು 3000 ಕ್ಕಿಂತ ಕಡಿಮೆ ರ್ಯಾಂಕ್ ಹಾಗೂ ಅಖಿಲ ಭಾರತ ರಾಂಕಿಂಗ್‌ನಲ್ಲಿ 60000 ಕ್ಕಿಂತ ಕಡಿಮೆ ರಾಂಕ್‌ನೊಂದಿಗೆ ಉತ್ತೀರ್ಣರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ 15000 ಕ್ಕಿಂತ ಕಡಿಮೆ ಇರಬೇಕು.

ಧನಸಹಾಯದ ಅರ್ಜಿಯನ್ನು ವಿದ್ಯಾಪೋಷಕ ಸಂಸ್ಥೆ www.vidyaposhak.ngo ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ದಾಖಲಾತಿ ಗಳನ್ನು ಅಪ್‌ಲೋಡ್‌ ಮಾಡಿ ಇದೇ ದಿನಾಂಕ 20 ರೊಳಗಾಗಿ ಸಲ್ಲಿಸ ಬೇಕು. ಹೆಚ್ಚಿನ ಮಾಹಿತಿಗಾಗಿ 9066116482 ಗೆ ಸಂಪರ್ಕಿಸಬಹುದು.

error: Content is protected !!