ಮರು ವಿನ್ಯಾಸಗೊಳಿಸಿದ ಬೆಳೆ ವಿಮೆ ಯೋಜನೆ ಕಂತು ಕಟ್ಟಲು ಸೂಚನೆ

ಚನ್ನಗಿರಿ,ಜು.9-  2023-24 ನೇ ಸಾಲಿಗೆ ಅನ್ವಯವಾಗುವಂತೆ ಅಡಿಕೆ, ಕಾಳುಮೆಣಸು, ದಾಳಿಂಬೆ, ಮಾವು ಮತ್ತು ವೀಳ್ಯದೆಲೆ ಬೆಳೆಗಳಿಗೆ ಪ್ರಕೃತಿ ವಿಕೋಪಗಳು, ಹವಾಮಾನ  ವೈಪರೀತ್ಯಗಳಾದ ಅತಿವೃಷ್ಟಿ, ಅನಾವೃಷ್ಟಿ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರವಾಹ, ಸಿಡಿಲಿನಿಂದ ಉಂಟಾಗುವ ಬೆಂಕಿ ಅವಘಡ ಇತ್ಯಾದಿ ಕಾರಣಗಳಿಂದ ಸಂಭವಿಸಬಹುದಾದ ಬೆಳೆ ಹಾನಿಯ ನಷ್ಟದ ಪರಿಹಾರವನ್ನು ಬೆಳೆ ವಿಮೆ ಘಟಕ  (ಹಳ್ಳಿ/ಗ್ರಾಮ ಪಂಚಾಯತಿ/ಹೋಬಳಿ) ವಾರು ನಿರ್ಧರಿಸಿ ಬೆಳೆ ನಷ್ಟದ ಪರಿಹಾರ ನೀಡುವುದರ ಮೂಲಕ ರೈತರಿಗೆ ನೆರವಾಗುವುದು   ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಮುಖ್ಯ ಉದ್ದೇಶವಾಗಿದೆ.

 ಅಡಿಕೆ,   ದಾಳಿಂಬೆ,  ಮಾವು,  ಕಾಳುಮೆಣಸು ಮತ್ತು  ವೀಳ್ಯೆದೆಲೆ ಬೆಳೆಗಾರರು ವಿಮಾ ಕಂತು   ಕಟ್ಟಲು 15-07-2023 ಕೊನೆಯ ದಿನವಾಗಿರುತ್ತದೆ ಹಾಗೂ ಮಾವು ಬೆಳೆಗೆ ದಿನಾಂಕ 31-07-2023 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಹೋಬಳಿ ಮಟ್ಟದ ಅಧಿಕಾರಿಗಳು ಹಾಗೂ ಈ ಕಛೇರಿಯನ್ನು ರೈತರು ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ. 

error: Content is protected !!