ಶ್ರೀ ಬಸವೇಶ್ವರ ಗ್ರಾಮೀಣ ಸಾಂಸ್ಕೃತಿಕ ಕಲಾ ವೇದಿಕೆ (ಎಲೆಬೇತೂರು) ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಬೆಂಗಳೂರು) ಇವರ ಸಂಯುಕ್ತಾಶ್ರಯದಲ್ಲಿ ವಿಚಾರ ಗೋಷ್ಠಿ ಮತ್ತು ಬಯಲಾಟ ಪ್ರದರ್ಶನದ ಉದ್ಘಾಟನಾ ಸಮಾರಂಭವು ಇಂದು ಮಧ್ಯಾಹ್ನ 1.30 ಕ್ಕೆ ಆರಾಧ್ಯ ಬಡಾವಣೆ, ಬಸಾಪುರದಲ್ಲಿರುವ ಶ್ರೀ ರೇವಣಸಿದ್ದೇಶ್ವರ ಪ್ರೌಢಶಾಲೆ ಮತ್ತು ಶ್ರೀಮತಿ ನಾಗಮ್ಮ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎಸ್. ನಾಗರಾಜು ವಹಿಸುವರು. ಎಲ್.ಹೆಚ್. ಅರುಣ ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ರವಿಚಂದ್ರ, ಎನ್.ಎಸ್. ರಾಜು ಆಗಮಿಸುವರು. ಕಾರ್ಯಕ್ರಮದಲ್ಲಿ ಬಯಲಾಟದ ಸಾಹಿತ್ಯ ಕುರಿತು ಹೆಚ್. ತಿಪ್ಪೇಸ್ವಾಮಿ ಉಪನ್ಯಾಸ ನೀಡುವರು ಹಾಗೂ ಯಕ್ಷಗಾನ ಅಕಾಡೆಮಿ (ಬೆಂಗಳೂರು)ಯ ನಿವೃತ್ತ ರಿಜಿ ಸ್ಟ್ರಾರ್ ಹೆಚ್.ಎಸ್. ಶಿವರುದ್ರಪ್ಪ ಅವರಿಗೆ ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ `ಭಾರ್ಗವ ಪರಶುರಾಮ’ ದೊಡ್ಡಾಟವನ್ನು ಜಿ. ಜ್ಯೋತಿ ಮತ್ಗು ಸಂಗಡಿಗರು (ಬಳ್ಳಾರಿ) ಪ್ರದರ್ಶಿಸುವರು ಎಂದು ಎನ್.ಎ. ವೀರಭದ್ರಯ್ಯ ತಿಳಿಸಿದ್ದಾರೆ.