ಬೆಂಗಳೂರು, ಜು. 6 – ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ನ 10 ನೇ ರಾಜ್ಯ ಸಮ್ಮೇಳನವು ನಾಡಿದ್ದು ದಿನಾಂಕ 8 ಮತ್ತು 9 ರಂದು ಬೆಂಗಳೂ ರಿನಲ್ಲಿ ಚಾಮರಾಜು ಕಲ್ಯಾಣ ಮಂದಿರದಲ್ಲಿ ನಡೆಯಲಿದೆ ಎಂದು ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ನ ರಾಜ್ಯ ಸಹ ಕಾರ್ಯದರ್ಶಿ ಕಾಂ.ಕೆ. ರಾಘವೇಂದ್ರ ನಾಯರಿ ತಿಳಿಸಿದ್ದಾರೆ.
ದಿನಾಂಕ 8 ರಂದು ಶನಿವಾರ ಸಂಜೆ 5 ಗಂಟೆಗೆ ಆರಂಭಗೊಳ್ಳಲಿರುವ ಸಮ್ಮೇಳನ ವನ್ನು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಹೆಚ್. ವೆಂಕಟಾಚಲಂ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಕೆನರಾ ಬ್ಯಾಂಕ್ ಎಂಪ್ಲಾ ಯೀಸ್ ಯೂನಿಯನ್ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಕಾಂ.ಕೆ. ಶ್ರೀಕೃಷ್ಣ, ವಿಶೇಷ ಅತಿಥಿಯಾಗಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆ ಸ್ನ ರಾಜ್ಯ ಪ್ರಧಾನ ಕಾರ್ಯ ದರ್ಶಿ ಕಾಂ.ಡಿ.ಎ. ವಿಜಯ ಭಾಸ್ಕರ್ ಆಗಮಿಸುವರು. ಗೌರವಾನ್ವಿತ ಅತಿಥಿಗಳಾಗಿ ಕೆನರಾ ಬ್ಯಾಂಕಿನ ಬೆಂಗಳೂರು ವೃತ್ತ ಕಛೇರಿಯ ಮಹಾ ಪ್ರಬಂಧಕ ಪಿ. ಗೋಪಿಕೃಷ್ಣ, ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ನ ಉಪ ಪ್ರಧಾನ ಕಾರ್ಯದರ್ಶಿ ಕಾಂ.ಕೆ.ಜಿ. ಪಣೀಂದ್ರ, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಕಾಂ. ಅನಿರುಧ್ ಕುಮಾರ್, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಖಜಾಂಚಿ ಕಾಂ.ಸಿ.ಎಸ್.ವೇಣುಗೋಪಾಲ್, ಕೆನರಾ ಬ್ಯಾಂಕ್ ಅಧಿಕಾರಿಗಳ ಸಂಘದ ರಾಜ್ಯ ಕಾರ್ಯದರ್ಶಿ ಕಾಂ.ಎಂ. ಪ್ರಶಾಂತ್ ಕು ಮಾರ್ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿ ಯನ್ನ ರಾಜ್ಯ ಸಮಿತಿಯ ಅಧ್ಯಕ್ಷ ಕಾಂ.ಆರ್.ಪಿ. ಪ್ರದೀಪ್ ಕುಮಾರ್ ವಹಿಸಿಕೊಳ್ಳು ವರು. ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಕಾಂ.ಬಿ. ದೇವದಾಸ್ ರಾವ್ ಸಮಾರಂಭದ ವೇದಿಕೆಯಲ್ಲಿರುವರು.
ಬ್ಯಾಂಕ್ ವಿಲೀನೀಕರಣ, ಬ್ಯಾಂಕ್ ಖಾಸಗೀಕರಣ, ಬ್ಯಾಂಕಿನಲ್ಲಿ ಅಗತ್ಯ ಪ್ರಮಾಣದಲ್ಲಿ ನೇಮಕಾತಿ ಆಗದಿರುವುದು, ಸಾಲ ವಸೂಲಾತಿ ಸಮಸ್ಯೆ, ಬ್ಯಾಂಕ್ ಶಾಖೆಗಳ ಮುಚ್ಚುವಿಕೆಯಂತಹ ಹತ್ತು ಹಲವು ಸಮಸ್ಯೆಗಳನ್ನು ಬ್ಯಾಂಕಿಂಗ್ ಕ್ಷೇತ್ರ ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ ನಡೆಯುತ್ತಿರುವ ಬ್ಯಾಂಕ್ ನೌಕರರ ಈ ಸಮ್ಮೇಳನವು ಅತೀ ಮಹತ್ವದ್ದಾಗಿದೆ.
ದಾವಣಗೆರೆ-ಚಿತ್ರದುರ್ಗ ಅವಳಿ ಜಿಲ್ಲೆಗಳಿಂದ ಕೆ.ರಾಘವೇಂದ್ರ ನಾಯರಿ, ಕೆ.ವಿಶ್ವನಾಥ್ ಬಿಲ್ಲವ, ಆರ್.ಆಂಜನೇಯ, ಪರಶುರಾಮ್, ಕೆ.ಶಶಿಶೇಖರ್, ಜಿ.ಶ್ರೀನಿವಾಸ್ ಸೇರಿದಂತೆ ಸುಮಾರು 140 ಸದಸ್ಯರು ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಮತ್ತು ವೀಕ್ಷಕರಾಗಿ ಭಾಗವಹಿಸಲಿದ್ದಾರೆ.