ದಾವಣಗೆರೆ, ಜು. 6-ತಾಲ್ಲೂಕಿನ ಶ್ಯಾಗಲೆ ಗ್ರಾಮದ ಕರಿಯಮ್ಮನ ದೇವಸ್ಥಾನದಲ್ಲಿದ್ದ ಹುಂಡಿಯನ್ನು ಕಳ್ಳರು ಕದ್ದೊಯ್ದ ಘಟನೆ ನಡೆದಿದೆ.
ಜು.3ರಂದು ರಾತ್ರಿ ಕಳ್ಳರು ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗವನ್ನು ಒಡೆದು ಪ್ರವೇಶಿಸಿ, ಅಂದಾಜು 15 ಸಾವಿರ ರೂ.ಗಳಿದ್ದ ಕಬ್ಬಿಣದ ಹುಂಡಿಯನ್ನು ಕದ್ದು ಕೊಂಡು ಹೋಗಿದ್ದಾರೆಂದು ದೇವಸ್ಥಾನದ ಸಮಿತಿ ಸದಸ್ಯ ಎಂ.ಪಿ. ಕುಬೇರಪ್ಪ ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.