ದಾವಣಗೆರೆ, ಜು. 6- ದಾವಣಗೆರೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಬಾಡ ಕ್ರಾಸ್, ಕುರ್ಕಿ, ಅತ್ತಿಗೆರೆ, ಬಾಡಾ, ಅಣಬೇರು ಮೂಲಕ ಮಾಯಕೊಂಡ ಗ್ರಾಮಕ್ಕೆ ಕೆಎಸ್ಸಾರ್ಟಿಸಿ ಬಸ್ ಸೌಕರ್ಯ ಪ್ರಾರಂಭ ಮಾಡಿದೆ.
ಬೆಳಿಗ್ಗೆ 8.55ಕ್ಕೆ ದಾವಣಗೆರೆ ಬಿಟ್ಟು, ಬಾಡ ಕ್ರಾಸ್, ಕುರ್ಕಿ, ಅತ್ತಿಗೆರೆ, ಬಾಡ, ಅಣಬೇರು ಮೂಲಕ 10 ಗಂಟೆಗೆ ಮಾಯಕೊಂಡ ತಲುಪುತ್ತದೆ. ಮತ್ತೆ ಬೆಳಿಗ್ಗೆ 10.10 ಕ್ಕೆ ಮಾಯಕೊಂಡದಿಂದ ಹೊರಟು ಶಂಕರನಹಳ್ಳಿ, ಅಣಬೇರು, ಬಾಡ ಮೂಲಕ ದಾವಣಗೆರೆ ತಲುಪುತ್ತದೆ. ಮತ್ತೆ ಮಧ್ಯಾಹ್ನ 1.40 ಕ್ಕೆ ದಾವಣಗೆರೆಯಿಂದ ಹೊರಟು 2.50ಕ್ಕೆ ಮಾಯಕೊಂಡ ತಲುಪುತ್ತದೆ. ಪುನಃ ಮಧ್ಯಾಹ್ನ 3ಕ್ಕೆ ಮಾಯಕೊಂಡದಿಂದ ಹೊರಟು ದಾವಣಗೆರೆ ತಲುಪುತ್ತದೆ. ಮತ್ತೆ ಸಂಜೆ 4.30ಕ್ಕೆ ದಾವಣಗೆರೆಯಿಂದ ಹೊರಟು 5.40ಕ್ಕೆ ಮಾಯಕೊಂಡ ತಲುಪುತ್ತದೆ. ಮತ್ತೆ 5.45ಕ್ಕೆ ಮಾಯಕೊಂಡದಿಂದ 6.15ಕ್ಕೆ ದಾವಣಗೆರೆ ತಲುಪುತ್ತದೆ.
ಕಳೆದ 2 ವರ್ಷಗಳಿಂದ ಕೊರೊನಾ ಪ್ರಯುಕ್ತ ಮಾಯಕೊಂಡಕ್ಕೆ ಹೋಗುವ ಬಸ್ ಸೌಕರ್ಯವನ್ನು ನಿಲ್ಲಿಸಲಾಗಿತ್ತು. ಮಾಯ ಕೊಂಡದ ನೂತನ ಶಾಸಕ ಕೆ.ಎಸ್.ಬಸವಂ ತಪ್ಪ ಅವರ ಸೂಚನೆಯ ಮೇರೆಗೆ ಕೆಎಸ್ಸಾ ರ್ಟಿಸಿ ಜಿಲ್ಲಾ ಅಧಿಕಾರಿ ಶ್ರೀನಿವಾಸಮೂರ್ತಿ ಮತ್ತು ಡಿಟಿಓ ಫಕೃದ್ದೀನ್ ಅವರುಗಳು ಅಣಬೇರು ಗ್ರಾಮಸ್ಥರ ಮನವಿ ಮೇರೆಗೆ ಮತ್ತೆ ಬಸ್ ಸೌಕರ್ಯ ಪ್ರಾರಂಭಿಸಿದ್ದಾರೆ.