ಸಿಎ ಪರೀಕ್ಷೆಯಲ್ಲಿ ನಗರದ ಗಗನ್‌ ನಾಡಿಗ್‌ ತೇರ್ಗಡೆ

ಸಿಎ ಪರೀಕ್ಷೆಯಲ್ಲಿ ನಗರದ ಗಗನ್‌ ನಾಡಿಗ್‌ ತೇರ್ಗಡೆ - Janathavaniದಾವಣಗೆರೆ, ಜು. 5 – ಭಾರತೀಯ ಲೆಕ್ಕ ಪರಿಶೋಧಕರ ಸಂಘ (ಐಸಿಎಐ)ವು ಈಚೆೆಗೆ ನಡೆಸಿದ 2023ನೇ ಸಾಲಿನ ಚಾರ್ಟರ್ಡ್ ಅಕೌಂಟೆಂಟ್ಸ್ (ಸಿಎ) ಅಂತಿಮ ಪರೀಕ್ಷೆಯಲ್ಲಿ ನಗರದ ಗಗನ್‌ ನಾಡಿಗ್‌ ತೇರ್ಗಡೆಯಾಗಿದ್ದಾರೆ.

ಸ್ಥಳೀಯ ಆರ್‌.ಜಿ. ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ 2018ನೇ ಸಾಲಿನ ವಿದ್ಯಾರ್ಥಿಯಾಗಿದ್ದ ಗಗನ್‌, ಬಿ.ಕಾಂ. ಪದವಿ ಪಡೆದಿದ್ದರು.

ಗಗನ್‌ ನಾಡಿಗ್‌, ನಗರದ ಲೆಕ್ಕಪರಿಶೋಧಕರಾದ ಗಿರೀಶ್‌ ನಾಡಿಗ್‌ ಅವರ ಪುತ್ರ. ಗಗನ್ ಅವರನ್ನು ಆರ್.ಜಿ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ವೇತಾ ಆರ್. ಗಾಂಧಿ ಅಭಿನಂದಿಸಿದ್ದಾರೆ.

error: Content is protected !!