ಹರಪನಹಳ್ಳಿ : ರಸ್ತೆ ಅಪಘಾತದಲ್ಲಿ ಅಪರಿಚಿತ ವ್ಯಕ್ತಿಯ ಸಾವು

ಹರಪನಹಳ್ಳಿ, ಜು.3- ಹರಪನಹಳ್ಳಿ-ಹರಿಹರ ರಸ್ತೆಯ ಬಲಭಾಗದಲ್ಲಿ ಅಪಘಾತಕ್ಕೀ ಡಾಗಿ ಸುಮಾರು 65-70 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದು, ವಾರಸುದಾರರ ಪತ್ತೆಗೆ ಹರಪನಹಳ್ಳಿ ಪೊಲೀಸ್ ಠಾಣೆ ಮನವಿ ಮಾಡಿದೆ. ಜೂನ್ 24 ರ ರಾತ್ರಿ ಈ ಅಪಘಾತ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೇ  ನಿನ್ನೆ ಸಂಜೆ ಆ ವ್ಯಕ್ತಿ ಮೃತಪಟ್ಟಿದ್ದಾನೆ. ಸಾಧಾರಣ  ಮೈಕಟ್ಟು, ಬಿಳಿ ಕೂದಲು ಹಾಗೂ ಗೋದಿಗೆಂಪು ಬಣ್ಣ, ಹೊಂದಿದ್ದು, ಬಿಳಿ ಬಣ್ಣದ ತುಂಬು ತೋಳಿನ ಬನಿಯನ್, ನೀಲಿ ಬಣ್ಣದ ಪಟ್ಟಾ-ಪಟ್ಟಿ ಲುಂಗಿ,  ಬೂದು ಬಣ್ಣದ ಡ್ರಾಯರ್ ಧರಿಸಿದ್ದಾನೆ.

error: Content is protected !!