ರೈಲಿಗೆ ಬಿದ್ದು ಅಪರಿಚಿತ ಯುವಕನ ಸಾವು

ದಾವಣಗೆರೆ, ಜೂ.30- ತೋಳಹುಣಸೆ ಮತ್ತು ಕೊಡಗನೂರು ರೈಲು ನಿಲ್ದಾಣಗಳ ಮಧ್ಯೆ ಅಪರಿಚಿತ ಯುವಕ ಸುಮಾರು 30-35 ವರ್ಷ ವಯಸ್ಸಿನ ಯುವಕನ ಶವ ದೊರೆತಿದೆ. ಮೃತನು ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ ಹೊಂದಿದ್ದು, ಆತನ ಬಲಗೈ ಅಂಗೈ ಮೇಲೆ R ಎಂದು ಮೊಣಕೈ ಕೆಳಗೆ HS ಎಂಬ ಹಚ್ಚೆ ಗುರುತು ಇರುತ್ತದೆ. ಎಡಗಡೆಯ ಎದೆ ಭಾಗದ ಮೇಲೆ ರತ್ನಮ್ಮ ಎಂಬ ಹಚ್ಚೆ ಗುರುತು ಇದೆ. ಬಲಗೈ ಅಂಗೈ ಹತ್ತಿರ ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತಾನೆ ಹಾಗೂ ಬಲಗಾಲ ಪಾದದ ಭಾಗದಲ್ಲಿ ಕಪ್ಪು ದಾರ ಕಟ್ಟಿರುತ್ತಾನೆ. ಮೃತನು ನೀಲಿ ಬಣ್ಣದ ತುಂಬು ತೋಳಿನ ರೆಡಿಮೇಡ್‌ ಅಂಗಿ, ಕಪ್ಪು ಬಣ್ಣದ ಪ್ಯಾಂಟ್‌, ಕಂದು ಬಣ್ಣದ ಕಾಚಾ ಧರಿಸಿರುತ್ತಾನೆ. ಸಂಬಂಧಪಟ್ಟವರು ದಾವಣಗೆರೆ ರೈಲ್ವೆ ಪೊಲೀಸ್‌ ಠಾಣೆಗೆ ಸಂಪರ್ಕಿಸುವುದು. ದೂರವಾಣಿ 08192-259643, 080-22871291, ಮೊಬೈಲ್‌ 9480

error: Content is protected !!