ದಾವಣಗೆರೆ, ಜೂ. 30- ನಗರದ ಎಂ.ಸಿ.ಸಿ. `ಎ’ ಬ್ಲಾಕ್ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಬರುವ ಜುಲೈ 3ರ ಸೋಮವಾರದಂದು ಗುರು ಪೂರ್ಣಿಮೆ ಆಚರಿಸಲಾಗುವುದು.
ಅಂದು ಬೆಳಿಗ್ಗೆ 6 ಗಂಟೆಗೆ ಕಾಕಡಾರತಿ, 9 ಗಂಟೆಗೆ ದೀಪಾರಾಧನೆ, ಕಲಶ ಸ್ಥಾಪನೆ, ನಂತರ ಗೋಪುರ ಧ್ವಜಾರೋಹಣ ಕಾರ್ಯಕ್ರಮಗಳು ಏರ್ಪಾಡಾಗಿವೆ ಎಂದು ಶ್ರೀ ಸಾಯಿ ಟ್ರಸ್ಟ್ ಕಾರ್ಯದರ್ಶಿ ಎಂ. ಶಿವಪ್ಪ ತಿಳಿಸಿದ್ದಾರೆ.
ಶ್ರೀ ಜಡೇಸಿದ್ಧ ಶಿವಯೋಗೀಶ್ವರ ಶಾಂತಾಶ್ರಮದ ಶ್ರೀ ಶಿವಾನಂದ ಸ್ವಾಮಿಗಳು, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಸಾಯಿ ಟ್ರಸ್ಟ್ ಕಾರ್ಯದರ್ಶಿ ಎಸ್.ಎಸ್. ಗಣೇಶ್, ಉಪಾಧ್ಯಕ್ಷ ಅಥಣಿ ವೀರಣ್ಣ ಮತ್ತು ಇತರರು ಉಪಸ್ಥಿತರಿರುವರು.
ಬೆಳಿಗ್ಗೆ 7 ರಿಂದ 2.30 ರವರೆಗೆ ಶ್ರೀ ಬಾಬಾರವರ ಬೆಳ್ಳಿಯ ಮೂರ್ತಿಗೆ ಹಾಲಿನ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಹಾಗೂ 12 ಗಂಟೆಗೆ ಮಹಾಮಂಗಳಾರತಿ ನಡೆಸಲಾಗುವುದು.
ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಸಾಯಿ ಸತ್ಯನಾರಾಯಣ ಪೂಜೆ, ರಾತ್ರಿ 8.30 ಕ್ಕೆ ಪಾಲಕಿ ಉತ್ಸವ, ಧುನಿ ಪೂಜೆ, ಶೇಜಾರತಿ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯುವುದು.
ದಿ. 3.07.2023 ರಿಂದ ವಿಜಯ ದಶಮಿವರೆಗೆ ಪ್ರತಿನಿತ್ಯ ಸಂಜೆ 7 ಗಂಟೆಯಿಂದ ಸಾಯಿ ಮಂದಿರದಲ್ಲಿ ವಿರೂಪಣ್ಣ ಅಂಬರ್ಕರ್ ಇವರು ಬಾಬಾರವರ ಪುರಾಣ ಪ್ರವಚನ ನಡೆಸಿಕೊಡುವರು.