ಐರಣಿ ಹೊಳೆಮಠ ಮಹಾಸಂಸ್ಥಾನದ ಶಾಖಾಮಠದಲ್ಲಿ ಗುರುಪೌರ್ಣಿಮೆ ಹಾಗೂ ಶಾಖಾಮಠದ 16ನೇ ವಾರ್ಷಿಕೋತ್ಸವದ ಪ್ರಯುಕ್ತ ಇಂದಿನಿಂದ 3 ರವರೆಗೆ ಪ್ರತಿದಿನ ಸಂಜೆ 7.30 ಕ್ಕೆ ಸತ್ಸಂಗ, ಭಜನೆ, ಪ್ರವಚನ ಕಾರ್ಯಕ್ರಮಗಳುನ್ನು ಹಮ್ಮಿಕೊಳ್ಳಲಾಗಿದೆ.
ಐರಣಿ ಹೊಳೆಮಠ ಮಹಾಸಂಸ್ಥಾನದ ಶ್ರೀ ಸದ್ಗುರು ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಗುರುಪೂರ್ಣಿಮ ಕಾರ್ಯಕ್ರಮ ಹಾಗೂ ಶ್ರೀಗಳಿಂದ ಆಶೀರ್ವಚನ ಜರುಗಲಿದೆ. ಕುಳ್ಳೂರಿನ ಶ್ರೀ ಬಸವಾನಂದ ಭಾರತಿ ಸ್ವಾಮೀಜಿ, ಜಡೇಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಉಪಸ್ಥಿತರಿರುವರು.
ದಿನಾಂಕ 3 ರ ಸೋಮವಾರ ಅಖಂಡ ಗುರು ಭಜನೆ, ಪಂಚಾಮೃತ ಅಭಿಷೇಕ, ಶೈಲಾಸ ಮಹಾಪೂಜೋತ್ಸವ ದರ್ಶನ, ಮಹಾಮಂಗಳಾರತಿ, ಮಹಾಪ್ರಸಾದ ಏರ್ಪಾಡಾಗಿದೆ ಎಂದು ಶಾಖಾ ಮಠದ ಜೆ.ಕೆ. ಶಿವಾನಂದ್ ತಿಳಿಸಿದ್ದಾರೆ.