ಅಗ್ನಿವೀರ್ ಆಯ್ಕೆಗೆ 17ರಿಂದ ಪರೀಕ್ಷೆ

ದಾವಣಗೆರೆ, ಜೂ.30- ಭಾರತೀಯ ಸೇನೆಯಲ್ಲಿನ ಅಗ್ನಿವೀರ್ ನೇಮಕಾತಿ ರಾಲಿಯು ಉಡುಪಿಯಲ್ಲಿನ ಮಹಾತ್ಮ ಗಾಂಧಿ ಸ್ಟೇಡಿಯಂನಲ್ಲಿ ಜುಲೈ 17 ರಿಂದ 25 ರ ವರೆಗೆ ನಡೆಯಲಿದೆ. ಅಗ್ನಿ ವೀರ್ ನೇಮಕಾತಿಗೆ ಆನ್‍ಲೈನ್‍ನ ಲ್ಲಿ ಅರ್ಜಿ ಸಲ್ಲಿಸಿ ಪ್ರವೇಶ ಪರೀ ಕ್ಷೆಯಲ್ಲಿ ಉತ್ತೀರ್ಣರಾದವರಿಗೆ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ. 

ಜಿಲ್ಲೆಯಿಂದ 91 ಜನರು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣ ರಾಗಿರುವರು. ಇವರು ಜುಲೈ 17 ರಂದು ಉಡುಪಿ ಮಹಾತ್ಮ ಗಾಂಧಿ ಸ್ಟೇಡಿಯಂನಲ್ಲಿ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಗಾಗಿ ಹಾಜ ರಾಗಬೇಕು. ವಿವರಕ್ಕೆ ಸಂಪರ್ಕಿಸಿ :  0824-2951276.

error: Content is protected !!