ಮುಂಗಾರು ಹಂಗಾಮಿಗೆ ವಿಮಾ ಯೋಜನೆ ಅನುಷ್ಠಾನ

ಬೆಳೆ ಸಾಲ ಮಂಜೂರಾತಿಗೆ ಬೆಳೆ ವಿಮೆ ಕಡ್ಡಾಯ 

ದಾವಣಗೆರೆ, ಜೂ.26- ಜಿಲ್ಲೆಯಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯನ್ನು ಜಾರಿಗೊಳಿಸಿದ್ದು, ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಬೆಳೆ ಸಾಲ ಪಡೆದ ಅಥವಾ ಪಡೆಯದ ರೈತರು ನೋಂದಾಯಿಸಿಕೊಳ್ಳಬಹುದು.

ಬೆಳೆ ಸಾಲ ಪಡೆದ ರೈತರನ್ನು ಬೆಳೆ ಸಾಲ ಮಂಜೂರು ಮಾಡುವಾಗ, ಕಡ್ಡಾಯವಾಗಿ ಬೆಳೆ ವಿಮೆಗೆ ಒಳಪಡಿಸ ಲಾಗುವುದು. ಬೆಳೆ ಸಾಲ ಪಡೆಯದ, ಇಚ್ಚೆಯುಳ್ಳ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಖಾತೆ ಪುಸ್ತಕ, ಪಾಸ್ ಪುಸ್ತಕ, ಕಂದಾಯ ರಶೀದಿ ಹಾಗೂ ಆಧಾರ ಸಂಖ್ಯೆಯನ್ನು ನೀಡಿ ಹತ್ತಿರದ ಬ್ಯಾಂಕ್, ಆರ್ಥಿಕ ಸಂಸ್ಥೆಗಳು ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವಿಮಾ ಕಂತನ್ನು ಪಾವತಿಸಿ ನೋಂದಾಯಿಸಲು ವಿನಂತಿಸಿದೆ. 

ಯೋಜನೆಯಡಿ ದಾವಣಗೆರೆ ಜಿಲ್ಲೆಯಲ್ಲಿ ಅಧಿಸೂಚನೆಗೊಂಡ ಬೆಳೆಗಳ ವಿವರ.   ಮಳೆ ಆಧಾರಿತ ಬೆಳೆಗಳಾದ ಮುಸುಕಿನ ಜೋಳ, ತೊಗರೆ, ಈರುಳ್ಳಿ,  ಎಳ್ಳು,  ಜೋಳ, ನೆಲಗಡಲೆ,  ರಾಗಿ  ಟೊಮ್ಯಾಟೋ, ನವಣೆ, ಹುರುಳಿ ಹತ್ತಿ ಇತ್ಯಾದಿ  ಮತ್ತು ನೀರಾವರಿ ಬೆಳೆಗಳಾದ ಭತ್ತ, ಮುಸುಕಿನ ಜೋಳ  ಸೂರ್ಯಕಾಂತಿ ಇತ್ಯಾದಿ. ಚನ್ನಗಿರಿ, ಜಗಳೂರು,   ದಾವಣಗೆರೆ,      ನ್ಯಾಮತಿ,   ಹರಿಹರ ಮತ್ತು   ಹೊನ್ನಾಳಿ  ತಾಲ್ಲೂಕುಗಳಲ್ಲಿನ     ರೈತರು ಬೆಳೆ ವಿಮೆಗೆ ನೋಂದಣಿ ಮಾಡಬಹುದು. 

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ,  ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ತೋಟಗಾರಿಕೆ ಇಲಾಖೆ, ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

error: Content is protected !!