ದಾವಣಗೆರೆ, ಜೂ. 25- ಶುದ್ಧ ಕುಡಿಯುವ ನೀರಿನ ಘಟಕದಲ್ಲಿದ್ದ ಎರಡು ಮೋಟಾರ್‌ಗಳು ಕಾಯಿನ್ ಬಾಕ್ಸ್‌ನಲ್ಲಿದ್ದ ಚಿಲ್ಲರೆ ಹಣ ಕಳ್ಳತನವಾಗಿರುವುದಾಗಿ ಹರಿಹರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಹರಿಹರ ತಾಲ್ಲೂಕು ಬೆಳ್ಳೂಡಿ ಗ್ರಾಮ ಪಂಚಾಯ್ತಿ ಸದಸ್ಯೆ ಗೀತಮ್ಮ ಅವರು ಕಳೆದೊಂದು ವರ್ಷದಿಂದ ರಾಜಗೊಂಡನ ಕಾಲೋನಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆ ಮಾಡುತ್ತಿದ್ದರು.
ಈ ಘಟಕದಲ್ಲಿ ಕಿಟಕಿ ತೆರೆದು ಮೋಟಾರ್‌ಗಳು ಹಾಗೂ ಹಣವನ್ನು ಕಳ್ಳತನ ಮಾಡಿರುವುದಾಗಿ ಗೀತಮ್ಮ ಅವರು ದೂರು ದಾಖಲಿಸಿದ್ದಾರೆ.