ದಾವಣಗೆರೆ, ಜೂ. 25- ಮೈಸೂರು ತಾಲ್ಲೂಕಿನ ಹದಿನಾರು ವರ್ಷದ ಅಪ್ರಾಪ್ತೆಯೊಬ್ಬಳನ್ನು ಮದುವೆಯಾಗಿ, ಗರ್ಭಿಣಿಯಾಗಲು ಕಾರಣರಾದ ತಿಪ್ಪೇಶಿ ಎಂಬ ಯುವಕನ ವಿರುದ್ಧ ಬಾಲ್ಯವಿವಾಹ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ನಗರದ ಬಾಲಕಿಯರ ಬಾಲಮಂದಿರ ಒಂದರಲ್ಲಿದ್ದ 16 ವರ್ಷ 6 ತಿಂಗಳ ಯುವತಿಯೊಬ್ಬಳನ್ನು ತಪಾಸಣೆ ಮಾಡಲಾಗಿ, ಅವಳು 3 ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಅವರನ್ನು ಆಪ್ತ ಸಮಾಲೋಚನೆಗೊಳಪಡಿಸಿದಾಗ ತಿಪ್ಪೇಶಿ ಎಂಬ ಯುವಕ ಪರಿಚಯವಾಗಿ, ದೇವಸ್ಥಾನವೊಂದರಲ್ಲಿ ಮದುವೆ ಮಾಡಿಕೊಂಡಿದ್ದಾರೆ. ನಂತರ ಗರ್ಭಿಣಿಯಾಗಿರುತ್ತೇನೆ ಎಂದು ತಿಳಿಸಿದ್ದಾರೆ. ಬಾಲಕಿ ಅಪ್ರಾಪ್ತಳಾದ ಕಾರಣ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.