ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಪರಿಣಾಮ ಜಾನಪದ ಕಲೆಗಳು ಮಾಯ

ಚನ್ನಗಿರಿಯ ಕೇದಾರ ಶಾಖಾ ಮಠದ ಡಾ. ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ವ್ಯಾಕುಲತೆ

ದಾವಣಗೆರೆ, ಜೂ. 25- ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯ ಪರಿಣಾಮ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ. ಪ್ರಪಂಚದ ಕಲೆಗಳ ತವರು ಭಾರತ ಎಂದು ಚನ್ನಗಿರಿಯ ಕೇದಾರ ಶಾಖಾ ಮಠದ ಡಾ. ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ವ್ಯಾಕುಲತೆ ವ್ಯಕ್ತಪಡಿಸಿದರು.

ನಗರದ ರೋಟರಿ ಬಾಲಭವನದಲ್ಲಿ ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕಳೆದ ವಾರ ಹಮ್ಮಿಕೊಂಡಿದ್ದ ಸಂಗೀತ ಸಂಭ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಹಿಂದಿನ ಕಾಲದಲ್ಲಿ ಮಠ-ಮಾನ್ಯಗಳು ಕಲೆಗಳ, ಕಲಾವಿದರ ಆಶ್ರಯ ತಾಣಗಳಾಗಿ ದ್ದವು. ಮಠಗಳು ಕಲಾವಿದರ ಬದುಕು ಕಟ್ಟಿಕೊಟ್ಟಿದ್ದವು. ಜಾನಪದ ಸಾಹಿತ್ಯ, ಕಲೆ, ಸಂಸ್ಕೃತಿಯ ತಾಯಿ ಬೇರಾಗಿ ಮಠಗಳು ಕೆಲಸ ಮಾಡುತ್ತಾ ಬಂದಿವೆ ಎಂದು ಹೇಳಿದರು. ಬಹುತೇಕ ಕಲಾವಿದರು ಆರ್ಥಿಕವಾಗಿ ಹಿಂದುಳಿದವರೇ ಆಗಿದ್ದಾರೆ. ಇಂತಹ ಕಲಾವಿ ದರ ಬಗೆಗಿನ ಕಾಳಜಿ, ಜನಸೇವೆಗೆ ಮುಂದಾಗಿ ರುವ ಸಂಘಟಕ ಎನ್.ಎಸ್. ರಾಜು ಅವರ ಸಮಾಜಮುಖಿ ಕಾರ್ಯ ಶ್ಲ್ಯಾಘನೀಯ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ನಿರ್ದೇಶಕ ರವಿಚಂದ್ರ ಮಾತನಾಡಿ, ಯಾವುದೇ ಶಿಫಾರಸ್ಸು, ಒತ್ತಡಗಳನ್ನು ಮಾಡಿಸದೇ ನೇರವಾಗಿ ಇಲಾಖೆ ಸಂಪರ್ಕಿಸಿ ಮಾಸಾಶನ, ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲೆಯ ಕಲಾವಿದರಿಗೆ  ಕರೆ ನೀಡಿದರು. 58 ವಯಸ್ಸಿನ ಕಲಾವಿದರು ಮಾಸಾಶನಕ್ಕೆ ಅರ್ಜಿ ಸಲ್ಲಿಸಲು ಅರ್ಹರಿದ್ದು, ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.

ನೋಂದಾಯಿತ ಕಲಾ ಸಂಘ-ಸಂಸ್ಥೆಗಳು ಇಲಾಖೆಯ ಧನ ಸಹಾಯ ಪಡೆದು ಕಲಾ ಪ್ರದರ್ಶನಗಳನ್ನು ನೀಡಲು ಅವಕಾಶವಿದ್ದು, ನಿಯಮಾನುಸಾರ ಅರ್ಜಿಗಳನ್ನು ಸಲ್ಲಿಸಿ ಸವ ಲತ್ತುಗಳನ್ನು ಪಡೆಯಬಹುದಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಂತಾದೇವಿ ಹಿರೇಮಠ, ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷೆ ಎಸ್.ಜಿ. ಶಾಂತ, ಹಿರಿಯ ಕಲಾವಿದ ಬಿ.ಇ. ತಿಪ್ಪೇಸ್ವಾಮಿ ಮಾತನಾಡಿದರು.

ವೀರಸಂಗಯ್ಯ, ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಸಲಹೆಗಾರ ಎನ್.ಎಸ್. ರಾಜು, ಹೊನ್ನಾಳಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಎ.ಜಿ. ಹೇಮ ಲತಾ ಮತ್ತಿತರರು ಉಪಸ್ಥಿತರಿದ್ದರು. ಶಾಂತಾದೇವಿ ಹಿರೇಮಠ, ತಿಮ್ಮಣ್ಣ, ಮಾರ್ತಾಂಡಪ್ಪ, ಶಿವಾಜಿರಾವ್ ಮತ್ತಿತ ರರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

error: Content is protected !!