ನಗರದಲ್ಲಿ ಬಿಡಾಡಿ ಹಂದಿ ಮಾಲೀಕರ ಸಮೀಕ್ಷೆ

ದಾವಣಗೆರೆ, ಜೂ.25-  ನಗರದಲ್ಲಿ  ಮಹಾನಗರ ಪಾಲಿಕೆ ವತಿಯಿಂದ ಬಿಡಾಡಿ ಹಂದಿ ಮಾಲೀಕರಿಗೆ ಪರ್ಯಾಯವಾಗಿ ಹಂದಿ ಸಾಕಾಣಿಕೆಗೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ ನಾಳೆ ದಿನಾಂಕ 26 ರಿಂದ ಜುಲೈ 3ರ ವರೆಗೆ ಬಿಡಾಡಿ ಹಂದಿ ಮಾಲೀಕರ ಸಮೀಕ್ಷೆ ನಡೆಸ ಲಾಗುವುದು ಎಂದು ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ತಿಳಿಸಿದ್ದಾರೆ. 

ಬಿಡಾಡಿ ಹಂದಿಗಳ ಮಾಲೀಕರುಪಾಲಿಕೆಯ ಆರೋಗ್ಯ ಇಲಾಖೆ ಕಛೇರಿಗೆ ತಮ್ಮ ಭಾವ ಚಿತ್ರ, ಆಧಾರ್, ಪಾನ್ ಇತ್ಯಾದಿ ಗುರುತಿನ ಚೀಟಿ ಮತ್ತು ಜಾತಿ ಪ್ರಮಾಣ ಪತ್ರದೊಂದಿಗೆ ಆಗಮಿಸಿ ಕಛೇರಿ ಯಿಂದ ಅರ್ಜಿ ನಮೂನೆ ಪಡೆದು ಮಾಹಿತಿಯನ್ನು ತಪ್ಪದೇ ಸಲ್ಲಿಸಬೇಕು ಎಂದು ಅವರು ಸೂಚಿಸಿದ್ದಾರೆ.

error: Content is protected !!