ದಾವಣಗೆರೆ, ಜೂ.25- ಶ್ರೀನಿಧಿ ಫೌಂಡೇಶನ್, ಸಮಾಜಮುಖಿ ಸೇವಾ ಸಂಸ್ಥೆಯಿಂದ ಕೊಡ ಮಾಡುವ 2023-24ನೇ ಸಾಲಿನ `ನ್ಯಾಷನಲ್ ಐಕಾನ್ ಅವಾರ್ಡ್’ ಪ್ರಶಸ್ತಿಯನ್ನು ಯೋಗಾಚಾರ್ಯ ಎನ್.ಪರಶುರಾಮಪ್ಪ ಅವರಿಗೆ ಪ್ರದಾನ ಮಾಡಲಾಯಿತು. ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಕಳೆದ ವಾರ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಎನ್.ಪರಶುರಾಮಪ್ಪ ಅವರು, ಜನರಿಗೆ ಯೋಗ ಅಭ್ಯಾಸ ಹೇಳಿಕೊಡುವ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸು ತ್ತಿರುವ ಸೇವೆಯನ್ನು ಗುರುತಿಸಿ `ನ್ಯಾಷನಲ್ ಐಕಾನ್ ಅವಾರ್ಡ್’ ನೀಡಿ ಗೌರವಿಸಲಾಗಿದೆ.
January 13, 2025