ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದು ಮತ್ತು ನಾಳೆ ರಾಷ್ಟ್ರಮಟ್ಟದ `ಎಮರ್ಜ್-2023′ ಮೆಗಾ ಟೆಕ್ನಿಕಲ್ ಫೆಸ್ಟ್ (ತಾಂತ್ರಿಕ ಉತ್ಸವ) ಆಯೋಜಿಸಲಾಗಿದೆ. ಆಟೋಸ್ ಕಂಪನಿ ನಿರ್ದೇಶಕ ಗೌಡ್ರ ಹೆಚ್. ಬಸವರಾಜಪ್ಪ, ನೆಕ್ಸ್‌ಗೇಟ್ ಪಯೋನಿಯರ್ ಸಲ್ಯೂಷನ್ ಕಂಪನಿಯ ನಿರ್ದೇಶಕ ಪ್ರಶಾಂತನಾಯ್ಕ, ಜೆಐಟಿ ಪ್ರಾಂಶುಪಾಲರಾದ ಡಾ. ಡಿ.ಬಿ. ಗಣೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮಂಗಳೂರು ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯ ರಿಂಗ್ ನಿರ್ದೇಶಕ ಡಾ. ಮಂಜಪ್ಪ, ಪ್ರೊಕ್ಸೆಲೆರಾ ಇಂಡಿಯಾ ಬೆಂಗಳೂರಿನ ನಿರ್ದೇಶಕ ಎನ್.ಡಿ. ವಿಜಯ್ ಕುಮಾರ್ ಭಾಗವಹಿಸಲಿದ್ದಾರೆ.
January 11, 2025