ಅನಿರ್ಬಂಧಿತ ವಿದ್ಯುಚ್ಛಕ್ತಿ ನಿಲುಗಡೆ ಬೆಸ್ಕಾಂಗೆ 25000 ರೂ. ದಂಡ

ದಾವಣಗೆರೆ, ಜೂ.25- ಬೆಸ್ಕಾಂ ಅಧಿಕಾರಿಗಳು ಕಾನೂನು ಬಾಹಿರವಾಗಿ ನಗರದ ಪ್ರವೀಣ್ ಉಲ್ಲಾಸ್ ರೇವಣ್‍ಕರ್ ಮನೆಯ ವಿದ್ಯುತ್ ಸರಬರಾಜನ್ನು ತಡೆಹಿಡಿದಿದ್ದು, ದೂರಿನ ಮೇರೆಗೆ ಜಿಲ್ಲಾ ಗ್ರಾಹಕರ ಪರಿಹಾರ ಆಯೋಗವು ಬೆಸ್ಕಾಂ ಕಂಪನಿಯವರ ಮೇಲೆ ರೂ. 25,000 ದಂಡ ವಿಧಿಸಲಾಗಿದೆ.

ಮೂರು ತಿಂಗಳಿಂದ ಬಿಲ್ ಪಾವತಿಸಿರುವುದಿಲ್ಲ ಎಂದು ವಿದ್ಯುತ್ ನಿಲುಗಡೆ ಮಾಡಲಾಗಿತ್ತು. ಆದರೆ ಗ್ರಾಹಕರು ಬೆಸ್ಕಾಂ ತನ್ನ ಸೇವೆಯನ್ನು ನೀಡುವಾಗ ಕೆಇಆರ್‍ಸಿ ಕೋಡ್ 2004 ರ ನಿಯಮ-9 ರ ಅಡಿಯಲ್ಲಿನ ಪ್ರಕ್ರಿಯೆಗಳನ್ನು ಪಾಲಿಸದೇ ವಿದ್ಯುತ್ ನಿಲುಗಡೆ ಮಾಡಲಾಗಿತ್ತು.  ಇದಕ್ಕೆ ಗ್ರಾಹಕರಿಗೆ ನೀಡುವ ಸೇವಾ ನ್ಯೂನ್ಯತೆ ಎಂದು ಜಿಲ್ಲಾ ಗ್ರಾಹಕರ ಪರಿಹಾರ ಆಯೋಗವು ಆದೇಶಿಸಿ ದೂರುದಾರನಿಗೆ ಉಂಟಾದ ಮಾನಸಿಕ ಹಿಂಸೆ ಮತ್ತು ಪ್ರಕರಣದ ನಡವಳಿಕೆಗೆ ರೂ.20,000 ಮತ್ತು ಪ್ರಕರಣದ ಖರ್ಚಿಗಾಗಿ ರೂ.5,000 ಗಳಂತೆ ಬೆಸ್ಕಾಂ ಕಂಪನಿಯವರು ದೂರುದಾರರಿಗೆ ಆದೇಶವಾದ 30 ದಿನಗಳ ಒಳಗಾಗಿ ನೀಡಬೇಕು, ತಪ್ಪಿದ್ದಲ್ಲಿ ಪ್ರತಿಶತ ಶೇ.6 ರಂತೆ ಬಡ್ಡಿಸಹಿತ ಪಾವತಿಸಬೇಕೆಂದು ಜೂನ್ 21 ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಾಂತೇಶ ಈರಪ್ಪ ಶಿಗ್ಲಿ ಮತ್ತು ಮಹಿಳಾ ಸದಸ್ಯರಾದ ಗೀತಾ ಬಿ.ಯು. ಅವರು ತೀರ್ಪು ನೀಡಿರುತ್ತಾರೆ.

error: Content is protected !!