ಅಂಧ ಮಕ್ಕಳ ವಸತಿಯುತ ಶಾಲೆಗೆ 1 ರಿಂದ 10 ನೇ ತರಗತಿ ಪ್ರವೇಶಕ್ಕೆ ಅರ್ಜಿ

ದಾವಣಗೆರೆ, ಜೂ.25-  ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ನಡೆಸಲ್ಪಡುತ್ತಿರುವ ಅಂಧ ಮಕ್ಕಳ ಸರ್ಕಾರಿ ವಸತಿಯುತ ಶಾಲೆಯಲ್ಲಿ 2023-24 ರ ಸಾಲಿಗೆ ಪ್ರವೇಶ ಪಡೆಯಲು 6 ರಿಂದ  18 ವರ್ಷದೊಳಗಿನ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಂದರಿಂದ ಹತ್ತನೇ ತರಗತಿಯವರೆಗೆ ಅಂದ ಹೆಣ್ಣು ಮಕ್ಕಳಿಗೆ ಉಚಿತ ಊಟ, ವಸತಿ ಸೌಲಭ್ಯ ಹಾಗೂ ಗಂಡು ಮಕ್ಕಳಗೆ ವಸತಿ ರಹಿತ ಶಿಕ್ಷಣ ನೀಡಲಾಗುತ್ತಿದ್ದು, 80 ನಿವಾಸಿಗಳಿಗೆ ಅವಕಾಶವಿರುತ್ತದೆ.

 ಆಸಕ್ತ ಅಭ್ಯರ್ಥಿಗಳು ನಗರದ ದೇವರಾಜ ಅರಸು ಬಡಾವಣೆಯ `ಬಿ` ಬ್ಲಾಕ್ ನಲ್ಲಿರುವ ಅಂಧ ಮಕ್ಕಳ ಸರ್ಕಾರಿ ವಸತಿಯುತ ಪಾಠಶಾಲೆ ಅಧೀಕ್ಷಕರನ್ನು ಸಂಪರ್ಕಿಸಿ ಪ್ರವೇಶಾತಿ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಹಾಯಕರಾದ ಗಂಗಾಧರಪ್ಪ ಹೆಚ್.ಎನ್. (99645 34883), ಕಾತ್ಯಾಯಿನಿ ಸಿ.ಕೆ (9481358884), ಬಸವರಾಜ್ ಮಾಗಡಿ (9900497393), ಶಿವಾನಂದ ಶೇ ಗುಣಸಿ (8867112890) ಅಥವಾ ಇ-ಮೇಲ್ [email protected] ಸಂಪರ್ಕಿಸಲು ಜಿಲ್ಲೆಯ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆ ಅಧೀಕ್ಷಕರು ತಿಳಿಸಿದ್ದಾರೆ.

error: Content is protected !!