ಜನಸ್ಪಂದನ ಸಭೆ ಪುನರಾರಂಭಿಸಲು ಆಗ್ರಹ

ಜನಸ್ಪಂದನ ಸಭೆ ಪುನರಾರಂಭಿಸಲು ಆಗ್ರಹ

ಹರಿಹರ, ಜೂ. 25 – ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ತಾಲ್ಲೂಕುವಾರು ನಡೆಸುತ್ತಿದ್ದ ಜನಸ್ಪಂದನ ಸಭೆಗಳನ್ನು ಪುನರಾರಂಭಿಸಬೇಕೆಂದು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆಗ್ರಹಿಸಿ ದ್ದಾರೆ. ಚುನಾವಣೆ ನಿಮಿತ್ತ ಕಳೆದ ಐದು ತಿಂಗಳಿಂದ ಇಂತಹ ಸಭೆ ತಾಲ್ಲೂಕು ಹಾಗೂ ಜಿಲ್ಲೆಯ ಬೇರೆ ತಾಲ್ಲೂಕುಗಳಲ್ಲಿ ನಡೆಸಲಾಗಿಲ್ಲ. ಈಗ ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ತಿಂಗಳಾಗಿದೆ. ಕೂಡಲೇ ಜನ ಸ್ಪಂದನ ಸಭೆಗಳನ್ನು ಜಿಲ್ಲೆಯಲ್ಲಿ ಪುನರ್ ಆರಂಭಿಸಬೇಕು. ಇದರಿಂದ ಶೋಷಿತರು ತಮ್ಮ ಅಹವಾಲು ಹೇಳಿಕೊಳ್ಳಲು ಜಿಲ್ಲಾ ಕೇಂದ್ರಕ್ಕೆ ಹೋಗುವುದು ತಪ್ಪಲಿದೆ ಎಂದವರು ಹೇಳಿದ್ದಾರೆ.

error: Content is protected !!