ಕುಂದೂರಿನ ಕಾಲೇಜು ಕಳ್ಳತನ ಪ್ರಕರಣ ಪತ್ತೆ : ಆರೋಪಿಗಳ ಬಂಧನ

ಹೊನ್ನಾಳಿ, ಜು. 25 – ತಾಲ್ಲೂಕಿನ ಕುಂದೂರು-ಕೂಲಂಬಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಬೇಧಿಸಿರುವ ಪೊಲೀಸರು  ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಕುಂದೂರು ಗ್ರಾಮದ ಆಂಜನೇಯ (22), ಆಕಾಶ್ (22) ಬಂಧಿತರು.  ಇವರು ಕಾಲೇಜಿನ ಕೊಠಡಿಯಲ್ಲಿದ್ದ 84,353 ರೂ. ಮೌಲ್ಯದ ಯುಪಿಎಸ್ ಬ್ಯಾಟರಿ, ಲ್ಯಾಪ್ ಟಾಪ್, ಡಿಜಿಟಲ್ ಪ್ರೊಜೆಕ್ಟರ್ ಕಳ್ಳತನ ಮಾಡಿ ದ್ದರು. ಈ ಕುರಿತು ಪ್ರಕರಣ ದಾಖಲಾಗಿತ್ತು. 

ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಉಪಾಧೀಕ್ಷಕ ಡಾ.ಸಂತೋಷ್ ಕೆ.ಎಂ., ಪಿಐ ಹೆಚ್.ಎಂ. ಸಿದ್ದೇಗೌಡ, ಎಎಸ್‌ಐ ಪರಶುರಾಮಪ್ಪ, ಸಿಬ್ಬಂದಿ ರಾಜು ಕೆ, ಧರ್ಮಪ್ಪ, ವಿಕ್ರಮ್, ಚೇತನ್, ಜಗದೀಶ್, ಮಂಜುನಾಥ್, ರಂಗನಾಥ್ ಅವರನ್ನು ಎಸ್ಪಿ ಅರುಣ್ ಕುಮಾರ್ ಪ್ರಶಂಸಿಸಿದ್ದಾರೆ.

error: Content is protected !!