ಹರಿಹರದಲ್ಲಿ ಐದೃಷ್ಟಿ ಆಸ್ಪತ್ರೆ ಉದ್ಘಾಟನೆ

ಹರಿಹರದಲ್ಲಿ ಐದೃಷ್ಟಿ ಆಸ್ಪತ್ರೆ ಉದ್ಘಾಟನೆ

ಹರಿಹರ, ಜೂ.25 – ಕಣ್ಣು ಚೆನ್ನಾಗಿದ್ದರೆ ವಿಶ್ವದ ಎಲ್ಲ ಸುಂದರ ಸೊಬಗು ನೋಡಿ ಆನಂದಿಸಬಹುದು. ಹೀಗಾಗಿ ಸಾರ್ವಜನಿಕರು ಕಣ್ಣಿನ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ಶಾಸಕ ಬಿ.ಪಿ. ಹರೀಶ್ ಕರೆ ನೀಡಿದರು.

ನಗರದ ಅಕ್ಷಯ ಆಸ್ಪತ್ರೆಯ ಆವರಣದಲ್ಲಿ ಐದೃಷ್ಟಿ ಕಣ್ಣಿನ ಆಸ್ಪತ್ರೆ ಉದ್ಘಾಟನೆ ಮಾಡಿ ಅವರು ಮಾತನಾಡಿದರು. 

ಅಕ್ಷಯ ಆಸ್ಪತ್ರೆಯ ಡಾ. ವಿ.ಟಿ. ನಾಗರಾಜ್ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಜುಲೈ 31ರವರಿಗೆ ಉಚಿತ ಕಣ್ಣಿನ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಐದೃಷ್ಟಿ ಕಣ್ಣಿನ ಆಸ್ಪತ್ರೆ ಸಿಎಂಓ ಡಾ. ಕಿರಣ್ ಮಾತನಾಡಿದರು.

ಈ ಸಂದ ರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಎನ್.ಜಿ. ನಾಗನಗೌಡ್ರು, ಉದ್ಯಮಿಗಳಾದ ಡಿ.ಹೇಮಂತ ರಾಜ್, ಕೃಷ್ಣ ಸಾ ಭೂತೆ, ಬೆಳ್ಳೂಡಿ ರಾಮಚಂದ್ರಪ್ಪ, ಹೆಚ್.ಎಂ. ನಾಗರಾಜ್, ಆರ್.ಟಿ. ವೆಂಕಟೇಶ್, ಪಾಪಣ್ಣ, ಡಾ.ವಿ.ಟಿ. ನಾಗರಾಜ್, ಡಾ.ಸೀಮಾ ವಿ‌.ಟಿ. ನಾಗರಾಜ್, ಡಾ. ಕವಿತಾ, ಪ್ರಿಯಾಂಕಾ, ಇಂಜಿನಿಯರ್ ಮಯೂರ್, ಮಿಠಾಯಿ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

error: Content is protected !!