ಜೂ. 23 ರಿಂದ ಮುಂಗಾರು ಮಳೆ : ಬಾಲಚಂದ್ರ ಶಾಸ್ತ್ರಿ

ದಾವಣಗೆರೆ, ಜೂ. 20 – ಬುಧ-ಶುಕ್ರರ ಮಧ್ಯ ಸೂರ್ಯನಿರು ವುದರಿಂದ ಮಳೆಗೆ ಆತಂಕವಿದ್ದು, ಇದೇ ದಿನಾಂಕ 24 ರಿಂದ ಬುಧಾಸ್ತನಾಗುವುದರಿಂದ ರಾಜ್ಯದ ಎಲ್ಲಾ ಭಾಗದಲ್ಲಿ ಬಿತ್ತನೆಗೆ ಸಾಕಷ್ಟು ಮಳೆಯಾಗುತ್ತೆ ಎಂದು ಹರಪನಹಳ್ಳಿ ತಾಲ್ಲೂಕು ಪುಣಬಘಟ್ಟದ ಪಿ.ಎಂ. ಬಾಲಚಂದ್ರ ಶಾಸ್ತ್ರಿ ತಿಳಿಸಿದ್ದಾರೆ.

ಜೂನ್ 23 ರಿಂದ 3, 4 ದಿನಗಳಲ್ಲಿ ರಾಜ್ಯದಲ್ಲೆಲ್ಲ ಮಳೆಯಾಗುತ್ತದೆ. ಕೆಲವು ಪಂಚಾಂಗದಲ್ಲಿ ಜೂನ್ 20 ಬುಧಾಸ್ತ ಬರೆದಿದ್ದಾರೆ. ಒಂಟಿಕೊಪ್ಪಲ್‌ ಪಂಚಾಂಗ ಪ್ರಕಾರ ಜೂನ್ 24 ಬುಧಾಸ್ತ ಇರುತ್ತದೆ ಪ್ರಯುಕ್ತ ಒಂದೆರಡು ದಿನ ಹಿಂದು ಮುಂದು ಆಗಬಹುದು. 

`ಅಧಿಕ ಶ್ರಾವಣೀ ಅಧಿಕ ವೃಷ್ಠಿ’ ಎಂಬಂತೆ ಈ ವರುಷ ಅಧಿಕ ಶ್ರಾವಣ ಬಂದಿರುವುದರಿಂದ ತಡವಾದರೂ ಹೆಚ್ಚಿನ ಮಳೆ ಆಗುತ್ತದೆ. ಪೈರು ಫಸಲು ಉತ್ತಮವಾಗಿ ಫಲಿಸುತ್ತವೆ. ರೈತರು ನೆಮ್ಮದಿಯಿಂದ ಇರುತ್ತಾರೆ. 

ಗುರುವನ್ನು ಶನಿ ವಿಕ್ಷಣೆ ಮಾಡುತ್ತಿರುವುದರಿಂದ ವರ್ಷಪೂರ್ತಿ ರಾಜ್ಯವನ್ನಾಳುವವರಾಗಲೀ, ಪ್ರಜೆಗಳಾಗಲೀ ನೆಮ್ಮದಿಯಿಂದ ಇರುವುದಿಲ್ಲ. ಮುಂದೆ ಜುಲೈ ತಿಂಗಳಲ್ಲಿ ಸಿಂಹ ರಾಶಿಗೆ ಕುಜ ಬಂದಾಗ ಶನಿ ಪ್ರಭಾವ ಹೆಚ್ಚಾಗಿ ರಾಜ್ಯದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತದೆ. 

error: Content is protected !!