ಸಹಕಾರ ಬ್ಯಾಂಕ್ : ತರಬೇತಿಗೆ ಅರ್ಜಿ

ದಾವಣಗೆರೆ,  ಜೂ. 18- ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ಜುಲೈ ಮಾಹೆಯಲ್ಲಿ ಪ್ರಾರಂಭ ಮಾಡಲಿರುವ 6 ತಿಂಗಳ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗಾಗಿ ಸಹಕಾರ ಸಂಘ, ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತರಬೇತಿ ಹೊಂದದೇ ಇರುವ ಸಿಬ್ಬಂದಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯದ ಬೆಂಗಳೂರು, ಮೈಸೂರು, ಮಡಿಕೇರಿ, ಮೂಡಬಿದ್ರೆ, ಶಿವಮೊಗ್ಗ, ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಸ್ಥಳಗಳಲ್ಲಿ  ತರಬೇತಿ ಸಂಸ್ಥೆಗಳನ್ನು ನಡೆಸಲಾಗುತ್ತದೆ.  ಇದೇ ದಿನಾಂಕ 21 ರೊಳಗಾಗಿ ಅರ್ಜಿ ಸಲ್ಲಿಸಲು ಜಿಲ್ಲಾ ಸಹಕಾರ ಒಕ್ಕೂಟ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು  ತಿಳಿಸಿದ್ದಾರೆ.

error: Content is protected !!