ಡಿ.ಇಡಿ, ಹೆಚ್‌ಐ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ, ಜೂ. 16- ದಿವ್ಯಾಂಗ ವ್ಯಕ್ತಿಗಳ ಕೌಶಲ್ಯಾಭಿವೃದ್ಧಿ ಪುನರ್ವಸತಿ ಮತ್ತು ಸಬಲೀಕ ರಣಗಳ ಸಂಯುಕ್ತ ಪ್ರಾದೇಶಿಕ ಕೇಂದ್ರದಿಂದ ಪ್ರಸಕ್ತ ವರ್ಷದ ಡಿ.ಇಡಿ ವಿಶೇಷ ಶಿಕ್ಷಣ (ಐಡಿಡಿ) ಹಾಗೂ ಹೆಚ್.ಐ. ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಿ.ಆರ್.ಸಿ. ಕೇಂದ್ರದ ಪ್ರಭಾರಿ ನಿರ್ದೇಶಕ ತಾಮರೈ ಸೆಲ್ವನ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಸಿಆರ್‌ಸಿ ಕೇಂದ್ರವು ಸಿಕಂದರಾಬಾದ್ ಆಡಳಿತ ನಿಯಂತ್ರಣದಡಿಯಲ್ಲಿ 2017ರಿಂದ ಕಾರ್ಯ ನಿರ್ವಹಿಸುತ್ತಿದೆ. ಭಾರತ ಸರ್ಕರಾದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ದಿವ್ಯಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆ ಸ್ಥಾಪಿಸಿದೆ. ಸಿ.ಆರ್‌ಸಿ ಮುಖ್ಯ ಉದ್ದೇಶ ವಿಕಲಚೇತನರ ಕಲ್ಯಾಣವಾಗಿದೆ ಎಂದರು.

ಪ್ರಸ್ತುತ ವರ್ಷ ಐಡಿಡಿ ಹಾಗೂ ಹೆಚ್‌ಐ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾ ಗಿದ್ದು, ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ.50 ಅಂಕ ಗಳಿಸಿರಬೇಕು. ಕೋರ್ಸ್ ಪೂರ್ಣ ಗೊಂಡ ನಂತರ ಉತ್ತಮ ಉದ್ಯೋಗಾವಕಶಗಳು ದೊರೆಯಲಿವೆ. ಕಳೆದ ವರ್ಷ 23 ವಿದ್ಯಾರ್ಥಿಗಳು ಕೋರ್ಸ್ ಪಡೆದಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀನಾಥ್, ಟಿ.ರಾಜು ಉಪಸ್ಥಿತರಿದ್ದರು.

error: Content is protected !!