ವಿಶ್ವಚೇತನದ ತನಿಷಾಗೆ ಕಾಮೆಡ್-ಕೆ ಪರೀಕ್ಷೆಯಲ್ಲಿ 349 ನೇ ರ‍್ಯಾಂಕ್‌

ವಿಶ್ವಚೇತನದ ತನಿಷಾಗೆ ಕಾಮೆಡ್-ಕೆ ಪರೀಕ್ಷೆಯಲ್ಲಿ 349 ನೇ ರ‍್ಯಾಂಕ್‌ - Janathavaniದಾವಣಗೆರೆ, ಜೂ. 13- ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರಮಟ್ಟದ ಕಾಮೆಡ್-ಕೆ ಪರೀಕ್ಷೆಯಲ್ಲಿ ನಗರದ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಪದವಿ ಪೂರ್ವ ಕಾಲೇಜಿನ ತನೀಷಾ ಎಸ್.ಎಂ. ಇವರು 99.57 ಶೇಕಡಾವಾರು ಅಂಕಗಳೊಂದಿಗೆ ರಾಜ್ಯದಲ್ಲಿ  349ನೇ  ರ‍್ಯಾಂಕ್‌  ಪಡೆದು ಜಿಲ್ಲೆಗೆ ಪ್ರಥಮರಾಗಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ. ರಾಂಕ್ ವಿಜೇತ ತನೀಷಾ ಅವರನ್ನು ಕಾಲೇಜಿನ ಕಾರ್ಯದರ್ಶಿ ವಿಜಯಲಕ್ಷ್ಮಿ, ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಅಭಿನಂದಿಸಿದ್ದಾರೆ.

error: Content is protected !!