ನಗರದಲ್ಲಿ ನಾಡಿದ್ದು ಉದ್ಯೋಗ ಮೇಳ

ದಾವಣಗೆರೆ, ಜೂ. 13-  ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಧ.ರಾ.ಮ ವಿಜ್ಞಾನ ಕಾಲೇಜು ವತಿಯಿಂದ ಇದೇ ದಿನಾಂಕ 16 ರಂದು ಬೆಳಗ್ಗೆ 10 ಕ್ಕೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಧ.ರಾ.ಮ ಕಾಲೇಜಿನಲ್ಲಿ ಜರುಗುವ ಉದ್ಯೋಗ ಮೇಳದಲ್ಲಿ ಹಲವು  ಖಾಸಗಿ ಕಂಪನಿಗಳು ಭಾಗವಹಿಸುತ್ತಿದ್ದು, ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿ.ಎ, ಬಿ.ಕಾಂ,ಬಿ.ಎಸ್ಸಿ, ಬಿ.ಬಿ.ಎ, ಬಿ.ಬಿ.ಎಂ, ಬಿ.ಸಿ.ಎ, ಎಂ.ಎ, ಎಂ.ಎಸ್ಸಿ ಎಂಕಾಂ, ಎಂಬಿಎ, ಹಾಗೂ ಸ್ನಾತ ಕೋತ್ತರ ಪದವಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.  ವಿವರಕ್ಕೆ 08192259446, 7760818607, 994557951 ಕ್ಕೆ  ಸಂಪರ್ಕಿಸಲು  ಜಿಲ್ಲಾ  ಉದ್ಯೋಗಾಧಿಕಾರಿ ಡಿ.ರವೀಂದ್ರ ತಿಳಿಸಿದ್ದಾರೆ.

error: Content is protected !!