ದಾವಣಗೆರೆ, ಜೂ. 12- ಮಹಿಳೆಯೊಬ್ಬರಿಗೆ ನಕಲಿ ಬಂಗಾರದ ಆಭರಣಗಳನ್ನು ನೀಡಿ ವಂಚಿಸಿದ ಘಟನೆ ನಗರದ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ನಗರದ ಇಂಡಸ್ಟ್ರೀಯಲ್ ಏರಿಯಾದ ವಾಸಿ ಸುಮಾ ವಂಚನೆಗೊಳಗಾದ ಗೃಹಿಣಿ. ಇವರು ಗೃಹ ಬಳಕೆ ವಸ್ತುಗಳನ್ನು ಖರೀದಿಸಲು ಅಶೋಕ ರಸ್ತೆಯ ಗೇಟ್ ಬಳಿ ನಿಂತಿದ್ದಾಗ, 50 ವರ್ಷದ ಅಪರಿಚಿತ ಮಹಿಳೆಯೊಬ್ಬರು ಪರಿಚಯಿಸಿಕೊಂಡು, ತನ್ನಲ್ಲಿರುವ ಬಂಗಾರದ ಆಭರಣಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ ಹೇಳಿ ನಂಬಿಸಿದ್ದಾರೆ.
ಸುಮಾರು 3.50 ಲಕ್ಷ ರೂ ಬೆಲೆ ಬಾಳುವ ತನ್ನ ಆಭರಣಗಳನ್ನು ಕಡಿಮೆ ಬೆಲೆಗೆ ಕೊಡುವುದಾಗಿ ಹೇಳಿ, ಸುಮಾ ಅವರಿಂದ 80 ಸಾವಿರ ಬೆಲೆ ಬಾಳುವ 3 ಗ್ರಾಂ ಬಂಗಾರದ ಕಿವಿ ಓಲೆ ಹಾಗೂ 15 ಗ್ರಾಂ ತೂಕದ ಬಂಗಾರದ ಸರ ಹಾಗೂ 10 ಸಾವಿರ ರೂ. ನಗದು ಹಣ ಪಡೆದು, ನಕಲಿ ಆಭರಣಗಳನ್ನು ನೀಡಿ ವಂಚಿಸಿದ್ದಾರೆ. ಈ ಕುರಿತು ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.