ಇಂದಿನಿಂದ ಎಸ್.ಎಸ್. ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ

ಇಂದಿನಿಂದ ಎಸ್.ಎಸ್. ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ - Janathavaniದಾವಣಗೆರೆ, ಜೂ.12- ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳು ಮತ್ತು ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ  ಅವರ 93 ನೇ ಹುಟ್ಟು ಹಬ್ಬದ ಪ್ರಯುಕ್ತ ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಇಂದಿನಿಂದ ಇದೇ ದಿನಾಂಕ 19 ರವರೆಗೆ ಸಾಮಾನ್ಯ ಮತ್ತು ಬಡ ಜನರಿಗೆ ಉಚಿತ, ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆಯನ್ನು ನೀಡಲಾಗುವುದು.

ವಾರ್ಡ್ ಬಾಡಿಗೆ, ವೈದ್ಯರ ಸೇವೆ, ಜ್ಯೂನಿಯರ್ ವೈದ್ಯರ ಸೇವೆ, ದಾದಿಯರ ಸೇವೆ, ಪ್ರಯೋಗಾಲಯಗಳ ಪರೀಕ್ಷೆಗಳಾದ ಸಿಬಿಸಿ, ಆರ್.ಎಫ್.ಟಿ, ಎಲ್.ಎಫ್.ಟಿ, ಈಸಿಜಿ, ಕ್ಷ-ಕಿರಣ ಪರೀಕ್ಷೆಗಳು ಸಂಪೂರ್ಣ ಉಚಿತವಾಗಿವೆ. ಉಚಿತ ಯು.ಎಸ್.ಜಿ. ಆಡ್ಬೋಮನ್ ಮತ್ತು ಪೇಲ್ವೀಸ್, ಶಸ್ತ್ರ ಚಿಕಿತ್ಸೆಯಲ್ಲಿ ಶೇ 50 ರಷ್ಟು ರಿಯಾಯಿತಿ, ಪ್ರಯೋಗಾಲಯ ಪರೀಕ್ಷೆ, ಕ್ಷ-ಕಿರಣ ಸೇವೆಗಳಲ್ಲಿ ಮೇಲೆ ತಿಳಿಸಿರುವ ಸೇವೆಗಳನ್ನು ಹೊರತುಪಡಿಸಿ, ಇತರೆ ಸೇವೆಗಳಿಗೆ ವಿನಾಯಿತಿ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಔಷಧಗಳಿಗೆ ಯಾವುದೇ ತರಹದ ರಿಯಾಯಿತಿ ಇರುವುದಿಲ್ಲ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ತಿಳಿಸಿದ್ದಾರೆ.

error: Content is protected !!