ದಾವಣಗೆರೆ, ಜೂ. 11- ಇತ್ತೀಚಿಗೆ ಬಿಐಇಟಿ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದಿಂದ ರಾಜ್ಯಮಟ್ಟದ ತಂತ್ರಜ್ಞಾನ ಪ್ರಬಂಧ ಸ್ಪರ್ಧೆ `ಪ್ಯಾಪಿರಸ್- 2023′ ನ್ನು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿತ್ತು.
ಇ.ಇ. ಪೋರಂ, ಐಎಸ್ಟಿಇ ಮತ್ತು ಐಇಟಿಇ ವಿದ್ಯಾರ್ಥಿ ಘಟಕಗಳ ಸಹಭಾ ಗಿತ್ವದೊಂದಿಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕರ್ನಾಟಕದ ವಿವಿಧ ಭಾಗಗಳಿಂದ 25 ತಂಡಗಳು ಭಾಗವಹಿಸಿದ್ದವು. ಕಾಗ್ವಿಷನ್ ಪ್ರಾಜೆಕ್ಟ್ ಪ್ರದರ್ಶನದಲ್ಲಿ 13 ತಂಡಗಳು ಭಾಗವಹಿಸಿದ್ದು, ಮೈಸೂರಿನ ದೀನಬಂಧು ಟ್ರಸ್ಟ್ ಆಡಳಿತಾಧಿಕಾರಿ ಪ್ರಜ್ಞಾ ನೀಲಗುಂದ ಕಾಶೀನಾಥ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಬಿಐಇಟಿ ಕಾಲೇಜಿನ ಪ್ರಾಧ್ಯಾ ಪಕರು ತೀರ್ಪುಗಾರರಾಗಿದ್ದರು.