ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ವಿಚಾರ ಗೋಷ್ಠಿ ಮತ್ತು ಸಂಗೀತ ಸಂಭ್ರಮ ಉದ್ಘಾಟನಾ ಸಮಾರಂಭವನ್ನು ಇಂದು ಮಧ್ಯಾಹ್ನ 3.30 ಕ್ಕೆ ಗಡಿಯಾರ ಕಂಬದ ಹತ್ತಿರವಿರುವ ಜಿಲ್ಲಾ ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀ ಡಾ. ಕೇದಾರಲಿಂಗ ಶಿವಶಾಂತ ವೀರ ಶಿವಾಚಾರ್ಯ ಸ್ವಾಮೀಜಿ (ಚನ್ನಗಿರಿ) ಸಾನ್ನಿಧ್ಯ ವಹಿಸುವರು. ಗಣ್ಯರಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಶ್ರೀಮತಿ ಎಲ್. ಭಾಗೀರಥಿ ಅಧ್ಯಕ್ಷತೆ ವಹಿಸುವರು. ಗೋಷ್ಟಿಯ ಚಿಂತಕರಾಗಿ ಬಸವರಾಜ ಐರಣಿ ಆಗಮಿಸಿ `ಬದುಕಿನ ಭವ್ಯತೆಗೆ ಕಲೆಗಳು ಜೀವನಾಡಿ’ ವಿಷಯ ಕುರಿತು ಮಾತನಾಡುವರು.
ಮುಖ್ಯ ಅತಿಥಿಗಳಾಗಿ ಅಶೋಕ ಛಲವಾದಿ, ರವಿಚಂದ್ರ, ಶ್ರೀಮತಿ ಪಂಕಜ ದಯಾನಂದ, ಬಿ.ಇ. ತಿಪ್ಪೇಸ್ವಾಮಿ, ಶ್ರೀಮತಿ ಎಸ್.ಜಿ. ಶಾಂತ, ಎನ್.ಎಸ್. ರಾಜು ಆಗಮಿಸುವರು.
ಸಂಗೀತ ಸುಧೆ ಉಣಬಡಿಸುವ ತಂಡಗಳು : ಕೆ.ಎನ್. ಗದ್ದಿಗೇಶ್ ಮತ್ತು ಸಂಗಡಿಗರು (ಉಕ್ಕಡಗಾತ್ರಿ), ಹಾದಿಮನೆ ನಾಗರಾಜ್ ಮತ್ತು ಸಂಗಡಿಗರು (ಅರಸೀಕೆರೆ), ಬಿ. ಲಕ್ಷ್ಮಣಚಾರಿ ಮತ್ತು ಸಂಗಡಿಗರು (ದಾವಣಗೆರೆ).