ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಇಂದು ಬೆಳಿಗ್ಗೆ 11 ಗಂಟೆಗೆ ಕಾಲೇಜು ಆವರಣದಲ್ಲಿ ಜರುಗಲಿದೆ.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕಮಲಾ ಸೊಪ್ಪಿನ್ ಅಧ್ಯಕ್ಷತೆ ವಹಿಸಲಿದ್ದು, ಬಾಪೂಜಿ ವಿದ್ಯಾಸಂಸ್ಥೆ ಸದಸ್ಯರಾದ ಪ್ರಭಾ ಮಲ್ಲಕಾರ್ಜುನ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಪ್ರೊ. ಆರ್.ಆರ್.ಶಿವಕುಮಾರ್, ಎವಿಕೆ ಪದವಿ ಪೂರ್ವ ಕಾಲೇಜಿನ ರವಿ ಬಣಕಾರ, ಡಾ. ರಣಧೀರ, ಡಾ. ಆರ್.ಜಿ. ಕವಿತ, ಎಂ.ಸಂಗೀತ, ಹೆಚ್.ಹೆಚ್. ಸ್ಮಿತಾ, ಟಿ. ಐಶ್ವರ್ಯ ಉಪಸ್ಥಿತರಿರುವರು.