ಶಿವಗೋಷ್ಠಿ ಸಮಿತಿ, ಶ್ರೀ ಶಿವಕುಮಾರಸ್ವಾಮಿ ಮಹಾಮಂಟಪ ಹಾಗೂ ಸಾದರ ನೌಕರರ ಬಳಗ ಇವರ ಸಹಯೋಗದಲ್ಲಿ ಶಿವಗೋಷ್ಠಿ 296 ಸ್ಮರಣೆ 68 ಕಾರ್ಯಕ್ರಮವು ಇಂದು ಸಂಜೆ 6.30 ಕ್ಕೆ ತರಳಬಾಳು ಬಡಾವಣೆಯ ಬಸವ ಮಂಟಪದಲ್ಲಿರುವ ಸರ್ವಮಂಗಳ ಸಭಾಭವನದಲ್ಲಿ ನಡೆಯಲಿದೆ.
ಅಧ್ಯಕ್ಷತೆಯನ್ನು ಎಂ.ಬಿ. ಸಂಗಮೇಶ್ವರಗೌಡ್ರು ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ. ಎನ್. ಕರಿಬಸಪ್ಪ ಚವಲಿಹಳ್ಳಿ ಆಗಮಿಸುವರು. ಕಾರ್ಯಕ್ರಮದಲ್ಲಿ `ಪುರಾತನ ನಾಯನ್ಮಾರರು’ ವಿಷಯ ಕುರಿತು ಗೋಷ್ಠಿ ನಡೆಯುವುದು. ಕಾರ್ಯಕ್ರಮದಲ್ಲಿ ಲಿಂ. ಶರಣ ಬಸವರಾಜ ಶಿವಪುರ ಇವರ ಸ್ಮರಣೆಯನ್ನು ಎಚ್.ಎಸ್. ದ್ಯಾಮೇಶ್ ನಡೆಸಿಕೊಡುವರು. ಕದಳಿ ಮಹಿಳಾ ವೇದಿಕೆ ಅವರಿಂದ ವಚನ ಗಾಯನ ನಡೆಯುವುದು.