ದಾವಣಗೆರೆ, ಜೂ. 7- ಬ್ಯಾಂಕಿಗೆ ಹಣ ಪಾವತಿ ಮಾಡದೇ ನಕಲಿ ರಸೀದಿ ನೀಡಿ 10 ಗ್ರಾಹಕರಿಗೆ 1.92, 458 ರೂ. ಗಳ ವಂಚನೆ ಮಾಡಿರುವ ಕೃತ್ಯ ಶಾಂತಿನಗರದಲ್ಲಿ ನಡೆದಿದೆ. ಬೆಳಗಾವಿ ತಿಲಕವಾಡಿಯ ಅಡಿವೆಪ್ಪ ಎಂಬುವರು ದೂರು ನೀಡಿದ್ದು, ಡೈನಾಮಿಕ್ ಏಜೆನ್ಸಿಗೆ ಮೋಸ ಮಾಡಿರುತ್ತಾರೆಂದು ದಾಖಲಾತಿ ಮತ್ತು ಗ್ರಾಹಕರ ಖಾತೆಯನ್ನು ಪರಿಶೀಲಿಸಿದಾಗ ಪ್ರಕರಣ ಬಯಲಾಗಿದೆ. ದಾವಣಗೆರೆ ಶಾಂತಿನಗರದ ಶಾಹೀಮ್ ಶೇಕ್ ಆರೋಪಿಯಾಗಿದ್ದು, ಈತನ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಡಿವೆಪ್ಪ ಮನವಿ ಮಾಡಿದ್ದಾರೆ.
January 12, 2025