ಮರು ಮೌಲ್ಯಮಾಪನ : ರಮ್ಯಾಗೆ ಹೆಚ್ಚುವರಿ 6 ಅಂಕ

ಮರು ಮೌಲ್ಯಮಾಪನ : ರಮ್ಯಾಗೆ ಹೆಚ್ಚುವರಿ 6 ಅಂಕ - Janathavaniಮಲೇಬೆನ್ನೂರು, ಜೂ. 6 – ಹರಿಹರ ತಾಲ್ಲೂಕು ಮಲೇಬೆನ್ನೂರು ಪಟ್ಟಣದ ಒಡೆಯರ್ ಬಸಾಪುರ ಗ್ರಾಮ ವ್ಯಾಪ್ತಿಯ ಪಟೇಲ್ ಬಸಪ್ಪ ಎಜುಕೇಶನ್ ಅಸೋಸಿಯೇಶನ್‌ನ ರಾಜ ರಾಜೇಶ್ವರಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಎಂ.ಎಸ್. ರಮ್ಯಾ ಅವರಿಗೆ ಎಸ್.ಎಸ್.ಎಲ್.ಸಿ ಮರು ಮೌಲ್ಯ ಮಾಪನದಲ್ಲಿ ಹೆಚ್ಚುವರಿ 6 ಅಂಕ ಲಭಿಸಿವೆ.

ಕಳೆದ ಮೇ ನಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟಗೊಂಡಿತ್ತು. ಕನ್ನಡ ದಲ್ಲಿ 117, ಇಂಗ್ಲೀಷ್‌ನಲ್ಲಿ 100, ಹಿಂದಿಯಲ್ಲಿ 100, ಗಣಿತದಲ್ಲಿ 91, ವಿಜ್ಞಾನ ದಲ್ಲಿ 93 ಹಾಗೂ ಸಮಾಜ ವಿಜ್ಞಾನದಲ್ಲಿ 93 ಅಂಕ ಪಡೆಯುವ ಮೂಲಕ ಒಟ್ಟು 594 ಅಂಕ ಹಾಗೂ ಶೇ 95.04 ಫಲಿತಾಂಶದೊಂದಿಗೆ ಉತ್ತೀರ್ಣಗೊಂಡಿದ್ದ ರಮ್ಯಾ ಕನ್ನಡ ಮತ್ತು ಸಮಾಜ ವಿಜ್ಞಾನದಲ್ಲಿ ಹೆಚ್ಚುವರಿ ಅಂಕ ನಿರೀಕ್ಷೆಯೊಂದಿಗೆ ಮರು ಮೌಲ್ಯ ಮಾಪನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈಗ ಮರು ಮೌಲ್ಯ ಮಾಪನ ದಲ್ಲಿ ಕನ್ನಡದಲ್ಲಿ 4 ಹಾಗೂ ಸಮಾಜ ವಿಜ್ಞಾನದಲ್ಲಿ 2  ಸೇರಿ ಒಟ್ಟು ಹೆಚ್ಚುವರಿ 6 ಅಂಕ ಲಭಿಸುವ ಮೂಲಕ ಒಟ್ಟು 594 ಇದ್ದ ಅಂಕ 600 (ಶೇ. 96) ಕ್ಕೆ ಏರಿದೆ.

ಆ ಮೂಲಕ ಈಗಾಗಲೇ ಒಟ್ಟು 600 ಅಂಕ ಹಾಗೂ ಶೇ. 96 ಫಲಿತಾಂಶದೊಂದಿಗೆ ಶಾಲೆಯ ಟಾಪರ್ ಆಗಿದ್ದ ಗೌರಿಕಾ ಎಂಬ  ವಿದ್ಯಾರ್ಥಿನಿಯಷ್ಟೇ ಸರಿ ಸಮಾನ ಅಂಕ ಗಳಿಸಿರುವ ರಮ್ಯಾ ಕೂಡ ಗೌರಿಕಾಳೊಂದಿಗೆ ಟಾಪರ್ ಸ್ಥಾನ ಹಂಚಿಕೊಂಡಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಜಿ.ಓ. ತಿಳಿಸಿದ್ದಾರೆ.

ಹೆಚ್ಚುವರಿ ಅಂಕ ಗಳಿಕೆಯೊಂದಿಗೆ  ಶಾಲೆಯ ಟಾಪರ್ ಆಗಿರುವ ರಮ್ಯಾಗೆ ಸಂಸ್ಥೆಯ ಕಾರ್ಯದರ್ಶಿ ಶಿವಾನಂದಪ್ಪ ಜಿ.ಬಿ., ಮುಖ್ಯೋಪಾಧ್ಯಾಯ ಶಶಿಧರ್ ಎಸ್., ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಪೋಷಕರು ಅಭಿನಂದಿಸಿದ್ದಾರೆ.

error: Content is protected !!