ದಾವಣಗೆರೆ, ಜೂ.4- ಉಕ್ಕಡಗಾತ್ರಿಯಿಂದ ನಿಟುಪಳ್ಳಿಗೆ ಬೈಕ್ನಲ್ಲಿ ಡ್ರಾಪ್ ಕೊಡುವುದಾಗಿ ಹೇಳಿ ಮಹಿಳೆಯಿಂದ ಬಂಗಾರದ ಆಭರಣ ಕಿತ್ತುಕೊಂಡು ಹೋಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಮೇ 28 ರಂದು ಸಂಜೆ 4 ಗಂಟೆಗೆ ಹರಿಹರ ಹಳ್ಳಾಪುರದ ಕಮಲಮ್ಮನವರನ್ನು ಉಕ್ಕಡಗಾತ್ರಿಯಿಂದ ನಿಟುಪಳ್ಳಿಗೆ ಬಿಡುವುದಾಗಿ ಬೈಕ್ನಲ್ಲಿ ಕೂರಿಸಿಕೊಂಡು ಉಕ್ಕಡಗಾತ್ರಿ ನಿಟುಪಳ್ಳಿ ರಸ್ತೆಯಲ್ಲಿ ಮೂತ್ರ ವಿಸರ್ಜನೆಗೆ ಬೈಕ್ ನಿಲ್ಲಿಸಿ, ಕಾರದ ಪುಡಿಯನ್ನು ಮಹಿಳೆಕೆ ತಿಕ್ಕಿ ಭುಜಕ್ಕೆ ಗುದ್ದಿ ಕೊರಳಲ್ಲಿದ್ದ 34 ಗ್ರಾ.ಂ ತೂಕದ 1.45 ಲಕ್ಷ ರೂ. ಬೆಲೆ ಬಾಳುವ ಬಂಗಾರದ ಸರ ಕಿತ್ತುಕೊಂಡಿದ್ದಾನೆಂದು ಹರಿಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ರಾಣೇಬೆನ್ನೂರು ಕೋಡಿಯಾಲ ಹೊಸಪೇಟೆಯ ಮಧುಚಂದ್ರ ಅಲಿಯಾಸ್ ಮಧು ಎಂಬುವವನನ್ನು ಬಂಧಿಸಿದ್ದು, ಆತನಿದೆ ಕೃತ್ಯಕ್ಕೆ ಉಪಯೋಗಿಸಿದ್ದ 70 ಸಾವಿರ ರೂ. ಬೆಲೆಯ ಬೈಕ್, ಸರವನ್ನು ಮಾರಾಟ ಮಾಡಿ ಉಳಿಸಿಕೊಂಡಿದ್ದ 70,200 ರೂ.ನಗದು ಹಾಗೂ ಸುಲಿಗೆ ಮಾಡಿಕೊಂಡು ಹೋಗಿದ್ದ 1.50 ಲಕ್ಷ ರೂ. ಬೆಲೆಯ 31.65 ಗ್ರಾಂ ಬಂಗಾರದ ಘಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಪತ್ತೆಯಲ್ಲಿ ಶ್ರಮಿಸಿದ ಹರಿಹರ ಸಿಪಿಐ ಎಂ.ಐ.ಗೌಡಪ್ಪಗೌಡ್ರ, ಪಿ.ಎಸ್.ಐ ಪ್ರಭು .ಡಿ. ಕೆಳಗಿನಮನಿ, ಯುವರಾಜ ಹಾಗೂ ಸಿಬ್ಬಂದಿಯವರಾದ ಎ.ಎಸ್.ಐ. ಶ್ರೀನಿವಾಸ, ವೆಂಕಟರಮಣ, ಫೈರೋಜ್ ಖಾನ್, ಶಿವಕುಮಾರ, ಮಹಮದ್ ಇಲಿಯಾಸ್, ನಾಗರಾಜ, ರಾಜಶೇಖರ್ ಸಂತೋಷಕುಮಾರ್, ನಾಗಪ್ಪ ಕಡೇಮನಿ, ಮಲ್ಲಿಕಾರ್ಜುನ, ಮುರುಳೀಧರ, ರಾಜು, ರಾಘವೇಂದ್ರ, ಶಾಂತರಾಜ, ಪ್ರಕಾಶ್ರವರ ತಂಡಕ್ಕೆ ಪೊಲೀಸ್ ಅಧೀಕ್ಷಕ ಡಾ. ಕೆ.ಅರುಣ್ ಶ್ಲ್ಯಾಘಿಸಿದ್ದಾರೆ.