ದಾವಣಗೆರೆ, ಜೂ. 4- ದಾವಣಗೆರೆ ಗಿಳಿವಿಂಡು ಬಳಗದ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಾಳೆ ದಿನಾಂಕ 5 ರಂದು ಸಂಜೆ 5.30 ಕ್ಕೆ ಜನತಾ ಬಜಾರ್ ಸಭಾಂಗಣದಲ್ಲಿ `ಗಿಳಿವಿಂಡು ನೋಡೋಣ ಬನ್ನಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಂ.ಜಿ. ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್ ಕಾರ್ಯಕ್ರಮ ಉದ್ಘಾಟಿಸು ವರು. ದಾವಣಗೆರೆ ವಿವಿ ಪ್ರಾಧ್ಯಾಪಕ ಪ್ರೊ.ಶಿಶುಪಾಲ್ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮೇಯರ್ ಎಸ್.ಟಿ. ವೀರೇಶ್, ಹಿರಿಯ ಪತ್ರಕರ್ತ ಕೆ. ಚಂದ್ರಣ್ಣ, ಎಸ್.ಬಿ.ಎಂ. ನಿವೃತ್ತ ಅಧಿಕಾರಿ ಅಜಿತ್ ಕುಮಾರ್ ಮತ್ತಿತರರು ಆಗಮಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಸ್.ಟಿ. ವೀರೇಶ್, ರಾಜಶೇಖರ್ ಸಕ್ಕಟ್ಟು, ಅಶೋಕ ದತ್ತಾತ್ರೇಯ ಭಟ್ ಮತ್ತಿತರರಿದ್ದರು.