ದಾವಣಗೆರೆ, ಜೂ.1- ದಾವಣಗೆರೆ ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಆದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾ ಗಿದೆ. ಫೌಂಡೇಶನ್ 1 ವರ್ಷ, ವಿಶೇಷ ಅಧ್ಯಯನ 3 ವರ್ಷ ಒಟ್ಟು 4 ವರ್ಷಗಳ ದೃಶ್ಯಕಲಾ ಪದವಿ ಶಿಕ್ಷಣ ನೀಡಲಾಗುವುದು. ಪ್ರವೇಶ ಬಯಸುವ ಅಭ್ಯರ್ಥಿ ಪಿಯುಸಿ ಅಥವಾ ಅದರ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗೆ ಮಹಾವಿದ್ಯಾಲಯದ ಸಂಯೋಜನಾಧಿಕಾರಿ ಡಾ. ಸತೀಶ್ ಕುಮಾರ್ ಪಂಚಪ್ಪ ವಲ್ಲೇಪುರೆ (9448414483) ಹಾಗೂ ಪ್ರವೇಶಾತಿಯ ನೋಡಲ್ ಅಧಿಕಾರಿಗಳಾದ ಡಾ. ಜೈರಾಜ ಎಂ. ಚಿಕ್ಕಪಾಟೀಲ್ (9986687098) ಅವರನ್ನು ಸಂಪರ್ಕಿಸಬಹುದು.
January 17, 2025