ದಾವಣಗೆರೆ, ಮೇ 30- ಮೊನ್ನೆ ದಿನಾಂಕ 29 ರ ಮಧ್ಯಾಹ್ನ ನಗರದ ಎಸ್ಕೇಪ್ ಹೋಟೆಲ್ ಬಳಿ ಓರ್ವ ಪುರುಷನ ಶವ ಪತ್ತೆಯಾಗಿದೆ. ಆತನು ಕಳೆದ ಕೆಲವು ದಿನಗಳ ಹಿಂದೆ ಗ್ರೀನ್ ಲ್ಯಾಂಡ್ಗೆ ಕೆಲಸ ಕೇಳಿಕೊಂಡು ಬಂದಾಗ ಹಾವೇರಿ ಜಿಲ್ಲೆಯ ಬ್ಯಾಡಗಿಯವನೆಂದು ತಿಳಿಸಿರುತ್ತಾನೆ, ಮಾಲೀಕರು ಆತನ ಆಧಾರ್ ಕಾರ್ಡ್ ತರಲು ಹೇಳಿರುತ್ತಾರೆ.
ನಂದೀಶ ಎಂಬ ಮೃತನು ಸುಮಾರು 40-50 ವರ್ಷದವನಾಗಿದ್ದು, ಎಣ್ಣೆಗೆಂಪು ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಮುಂದಲೆಯಲ್ಲಿ ಕಡಿಮೆ ಕೂದಲು ಇರುತ್ತದೆ. ಮೃತನು ನೀಲಿ ಬಣ್ಣದ ಫುಲ್ ಟೀ ಶರ್ಟ್ ಮತ್ತು ನೈಟ್ ಪ್ಯಾಂಟ್ ಧರಿಸಿರುತ್ತಾನೆ. ಈತನ ಗಂಡಸಿನ ವಾರಸುದಾರರು ವಿದ್ಯಾನಗರ ಪೊಲೀಸ್ ಠಾಣೆಯನ್ನು (08192-262688, ಮೊ : 9480803251) ಸಂಪರ್ಕಿಸಬಹುದಾಗಿದೆ.