ದಾವಣಗೆರೆ, ಮೇ 29 – ಇತ್ತೀಚಿಗೆ ನಡೆದ ಕೆ 12 ಟೆಕ್ನೋ ಸರ್ವೀಸಸ್ ಕಂಪನಿಯ ಸಂದರ್ಶನ ಪ್ರಕ್ರಿಯೆಯಲ್ಲಿ ಜಿಎಂಐಟಿ ಕಾಲೇ ಜಿನ ಎಂಬಿಎ ವಿಭಾಗದಿಂದ 11 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳಾದ ಕೆ. ಅಭಿಷೇಕ್, ಎನ್.ಬಿ. ದೇವರಾಜ್, ಹೆಚ್.ಎಂ. ಮಂಜುನಾಥ, ಕೆ.ಪಿ. ಪದ್ಮಶ್ರೀ, ಡಿ. ಪ್ರಸಾದ್, ಎನ್. ರಕ್ಷಾ, ಎಂ. ಪ್ರಿಯಾಂಕಾ, ಡಿ.ಆರ್. ಕೊಟ್ರೇಶ್, ರವಿ ಕಿರಣ ಎಸ್ವಿ, ಸ್ವಪ್ನ, ಎಸ್.ಎಂ. ವಚನ ಅವರಿಗೆ ಕಾಲೇಜಿನ ಛೇರ್ಮನ್ ಜಿ.ಎಂ. ಲಿಂಗರಾಜು, ಆಡಳಿತಾಧಿಕಾರಿ ವೈ.ಯು. ಸುಭಾಷ್ಚಂದ್ರ, ಪ್ರಾಂಶುಪಾಲ ಡಾ. ಎಂ.ಬಿ. ಸಂಜಯ್ ಪಾಂಡೆ, ಎಂಬಿಎ ವಿಭಾಗದ ನಿರ್ದೇಶಕ ಡಾ. ಬಿ. ಬಕ್ಕಪ್ಪ, ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಪಿ.ಎಸ್. ಬಸವರಾಜ್, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಟಿ.ಆರ್. ತೇಜಸ್ವಿ ಕಟ್ಟಿಮನಿ, ವಿಭಾಗದ ಪ್ಲೇಸ್ಮೆಂಟ್ ಸಂಯೋಜಕ ಪ್ರೊ. ವಿನಯ್ ಮತ್ತು ಪ್ರಾಧ್ಯಾಪಕ ವರ್ಗದವರು ಅಭಿನಂದಿಸಿದ್ದಾರೆ.