ಶ್ರೀ ತರಳಬಾಳು ಜಗದ್ಗುರುಗಳ ಆದೇಶ ಜಾರಿ
ದಾವಣಗೆರೆ, ಮೇ 29- ಇತ್ತೀಚೆಗೆ ಕೊಟ್ಟೂರಿನಲ್ಲಿ ಜರುಗಿದ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂದರ್ಭದಲ್ಲಿ ಅಲ್ಲಿನ ಕಾಳಾಪುರ ಗ್ರಾಮವನ್ನು ದತ್ತು ತೆಗೆದುಕೊಳ್ಳುವುದಾಗಿ ಶ್ರೀ ತರಳಬಾಳು ಜಗದ್ಗುರು ಗಳು ಘೋಷಿಸಿದ್ದರು. ಅದು ಈಗ ಜಾರಿಯಾಗಿದೆ. ಆ ಪ್ರಕಾರ ಕಾಳಾಪುರ ಗ್ರಾಮದ ಮಕ್ಕಳಿಗೆ ನಾಡಿನ ನಾನಾ ಸ್ಥಳಗಳಲ್ಲಿರುವ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲಾ-ಕಾಲೇಜ್ಗಳಲ್ಲಿ ನರ್ಸರಿಯಿಂದ ಕಾಲೇಜ್ನವರೆಗೆ ಉಚಿತ ಶಿಕ್ಷಣ ನೀಡಲು ತೀರ್ಮಾನಿಸಲಾಗಿದೆ. ಆಸಕ್ತ ಪೋಷಕರು ತಮ್ಮ ಮಕ್ಕಳ ಹೆಸರನ್ನು ಕೊಟ್ಟೂರಿನ ಹುಣಸೇಕಟ್ಟೆ ಕ್ರಾಸ್ನಲ್ಲಿರುವ ತರಳಬಾಳು ಶಾಲೆ ಮುಖ್ಯೋಪಾಧ್ಯಾಯರನ್ನು ಖುದ್ದಾಗಿ ಕಂಡು, ದಿನಾಂಕ 15-6-2023ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ಸಂಸ್ಥೆಯ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.