ಅಂಗನವಾಡಿ: ಕಳ್ಳತನ

ದಾವಣಗೆರೆ, ಮೇ 29- ಇಲ್ಲಿನ ಕೆಟಿಜೆ ನಗರ ಅಂಗನವಾಡಿಯೊಂದರಲ್ಲಿ ಸುಮಾರು 25 ಸಾವಿರ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗಿದೆ. ದಿ.22ರಂದು ಬೆಳಿಗ್ಗೆ ಬಂದು ನೋಡಿದಾಗ ಬೀಗ ಮುರಿದು ಅಲ್ಲಿದ್ದ ಫಿಲ್ಟರ್, ಜಮಖಾನ್, ಕುಕ್ಕರ್, ತಟ್ಟೆಗಳು, ಲೋಟ, ಜಗ್ಗು, ಬಾಂಡಲಿ, ಕೊಳಗ, ಸಿಲಿಂಡರ್, ಗರ್ಭಿಣಿ ಹಾಗೂ ಮಗುವಿನ ತೂಕದ ಮಿಷನ್, ಅಡುಗೆ ಎಣ್ಣೆ ಸೇರಿದಂತೆ ವಿವಿಧ ವಸ್ತುಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆ ಸುರೇಖ ಅವರು ದೂರು ನೀಡಿದ್ದಾರೆ.

error: Content is protected !!