ದಾವಣಗೆರೆ, ಮೇ 27- ಪಾದಚಾರಿ ಮಹಿಳೆಯ ಮೊಬೈಲ್ ಫೋನ್, 5 ಸಾವಿರ ರೂ. ನಗದು, ದಾಖಲಾತಿಗಳಿದ್ದ ಬ್ಯಾಗ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಸ್ಥಳೀಯ ವಿದ್ಯಾನಗರ ಠಾಣೆ ಪೊಲೀಸರು ಇಂದು ಬಂಧಿಸಿದ್ದಾರೆ.
ಕಳೆದ 2023, ಏಪ್ರಿಲ್ 23ರಂದು ಮಹಾಲಕ್ಷ್ಮಿ ಲೇಔಟ್ನ ಕಾವೇರಿ ಅಪಾರ್ಟ್ಮೆಂಟ್ ಬಳಿ ತನ್ನ ಮಗಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರ್ ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ತನ್ನಲ್ಲಿದ್ದ ಬ್ಯಾಗ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದ ಎಂದು ಶ್ರೀಮತಿ ಉಷಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದರು.
ತನಿಖೆ ಕೈಗೊಂಡ ಪೊಲೀಸರು, ಪುಟಗನಾಳ್ ಗ್ರಾಮದ ವಾಸಿ ಎನ್ನಲಾದ ಯಲ್ಲಪ್ಪನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.