ಚಿರಂತನ ಸಂಸ್ಥೆಯ 21 ನೇ ವರ್ಷದ ಸಾರ್ಥಕ ಸಂಭ್ರಮದ ಪ್ರಯುಕ್ತ `ಚಿರಂತನ ಉತ್ಸವ’ ನೃತ್ಯ ಹಾಗೂ ಸಂಗೀತ ಹಬ್ಬ ಕಾರ್ಯಕ್ರಮ ಇಂದು ಸಂಜೆ 6 ಗಂಟೆಗೆ ನಗರದ ಬಾಪೂಜಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಚಿರಂತನ ಸಂಸ್ಥೆ ಅಧ್ಯಕ್ಷರಾದ ಶ್ರೀಮತಿ ದೀಪಾ ಎನ್. ರಾವ್ ತಿಳಿಸಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಛಲವಾದಿ, ಖ್ಯಾತ ನೃತ್ಯಗಾರ ಅಶ್ವಥ್ ಹರಿತನ್, ಉದ್ಯಮಿ ಅಥಣಿ ವೀರಣ್ಣ, ಎಸ್.ಎಸ್. ಕೇರ್ ಟ್ರಸ್ಟ್ ಸದಸ್ಯರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಉದ್ಯಮಿ ಹೇಮಾ ನಿರಂಜನ್
ಮುಖ್ಯ ಅತಿಥಿಗಳಾಗಿದ್ದಾರೆ.
December 23, 2024