ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಬಿಇ ವಿದ್ಯಾರ್ಥಿಗಳ ಯೋಜನಾ ವಸ್ತು ಪ್ರದರ್ಶನ – ನಿರ್ಮಾಣ 3.0 ಕಾರ್ಯಾಗಾರವನ್ನು ಇಂದು ಬೆಳಿಗ್ಗೆ 10.30ಕ್ಕೆ ಕಾಲೇಜಿನ ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಹಿರಿಯ ವಿದ್ಯಾರ್ಥಿ ಹಾಗೂ ಶಿವಮೊಗ್ಗದ ಕೈಗಾರಿಕೋದ್ಯಮಿ ಮತ್ತು ಕೊಲ್ಕೊತ್ತಾದ ಇನ್ಸ್ಟಿಟ್ಯೂಟ್ ಇಂಡಿಯನ್ ಫೌಂಡ್ರಿಮೆನ್ ಸಂಸ್ಥೆಯ ಉಪಾಧ್ಯಕ್ಷ ಇಂಜಿನಿಯರ್ ಡಿ.ಎಸ್.ಚಂದ್ರಶೇಖರ್ ನೆರೆವೇರಿ ಸಲಿದ್ದಾರೆ. ಪ್ರಾಂಶುಪಾಲ ಡಾ. ಎಚ್.ಬಿ.ಅರವಿಂದ್, ನಿರ್ದೇಶಕ ಪ್ರೊ.ವೈ.ವೃಷಬೇಂದ್ರಪ್ಪ ಇತರರು ಉಪಸ್ಥಿತರಿರಲಿದ್ದಾರೆಂದು ಕಾರ್ಯಾಗಾ ರದ ಆಯೋಜಕರಾದ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿಕಾಯರಾದ ಡಾ. ಎ.ಜಿ.ಶಂಕರಮೂರ್ತಿ ತಿಳಿಸಿದ್ದಾರೆ.